ಬಿಲ್ ಕಲೆಕ್ಟರ್ ಅನುಮಾನಾಸ್ಪದ ಸಾವು: ಆಶಾ ಕಾರ್ಯಕರ್ತೆ ಮನೆ ಮುಂದೆ ಶವವಾಗಿ ಪತ್ತೆ….

ಚಾಮರಾಜನಗರ,ಜೂ,3,2020(www.justkannada.in):  ರಾತ್ರಿ ಮನೆಯಿಂದ ಹೊರ ಹೋಗಿದ್ದ ಬಿಲ್ ಕಲೆಕ್ಟರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರದ ವೆಂಕಟಯ್ಯನಛತ್ರ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಬಸವರಾಜು(38) ಮೃತಪಟ್ಟವರು. ಬಸವರಾಜು ಕಳೆದ ರಾತ್ರಿ ಮನೆಯಿಂದ ಹೋರಹೋಗಿದ್ದರು. ಈ ನಡುವೆ ಆಶಾ ಕಾರ್ಯಕರ್ತೆ ಶಾರದಾ ಎಂಬುವವರ ಮನೆಯ ಮುಂದೆ ಬಸವರಾಜು ಶವವಾಗಿ ಪತ್ತೆಯಾಗಿದ್ದಾರೆ. ಬೈಕ್ ಮಾತ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗ ನಿಂತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.bill-collector-suspicious-death-chamarajanagar

ಬಸವರಾಜು  ಕೋವಿಡ್19 ಹಿನ್ನೆಲೆಯಲ್ಲಿ ಹರದನಹಳ್ಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಹೆಚ್ಷುವರಿಯಾಗಿ ಕೆಲಸ ಮಾಡುತ್ತಿದ್ದರು. ಇದೀಗ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Bill collector- suspicious- death-chamarajanagar