ದೊಡ್ಡ ಗಡಿಯಾರ ಕಟ್ಟಡವೂ ಗಟ್ಟಿ ಇಲ್ಲ ! ಸಮಗ್ರ ಸಂರಕ್ಷಣೆಗೆ ಯೋಜನೆ ರೂಪಿಸಿದ್ದೇವೆ ಎಂದ ಪಾಲಿಕೆ ಆಯುಕ್ತ

ಮೈಸೂರು,ಜೂ,3,2020(www.justkannada.in): ನಗರದ ದೊಡ್ಡ ಗಡಿಯಾರ ಮಾತ್ರ ಕೆಟ್ಟುಹೋಗಿಲ್ಲ. ಕಟ್ಟಡವೂ ಬಿದ್ದು ಹೋಗುವ ಸ್ಥಿತಿಯಲ್ಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಒಪ್ಪಿಕೊಂಡಿದ್ದಾರೆ.

ಪಾರಂಪರಿಕ ಕಟ್ಟಡದ ಬಗ್ಗೆ ವಾಸ್ತವ ಪರಿಸ್ಥಿತಿ ಒಪ್ಪಿಕೊಂಡಿರುವ ಪಾಲಿಕೆ ಆಯುಕ್ತರು, ದೊಡ್ಡ ಗಡಿಯಾರ ಕೆಟ್ಟು ಹೋಗಿದೆ. ಗಡಿಯಾರದ ಮೇಲ್ಭಾಗದಲ್ಲಿ ಬಿರುಕು ಇದೆ. ಒಳ ಭಾಗದಲ್ಲಿ ಶಿಥಿಲಾವಸ್ಥೆ ತಲುಪಿದೆ ಎಂದು ಹೇಳಿದ್ದಾರೆ.

ಅದನ್ನು ಹಾಗೆಯೇ ಬಿಟ್ಟರೆ ಭವಿಷ್ಯದಲ್ಲಿ ದೊಡ್ಡ ಗಡಿಯಾರ ಕಟ್ಟಡವೇ ಬಿದ್ದು ಹೋಗಬಹುದು. ಆದ್ದರಿಂದ ಸಮಗ್ರ ಸಂರಕ್ಷಣೆಗೆ ಯೋಜನೆ ರೂಪಿಸಿದ್ದೇವೆ. 35 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುವುದು‌ ಎಂದು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದ್ದಾರೆ.