ವಿ.ಶ್ರೀನಿವಾಸ್ ಪ್ರಸಾದ್ ಭೇಟಿ ಮಾಡಿದ ಹೆಚ್.ವಿಶ್ವನಾಥ್: ಸಲಹೆ ಮೂಲಕ ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದ ‘ಹಳ್ಳಿಹಕ್ಕಿ’.

ಮೈಸೂರು,ಜೂ,2,2021(www.justkannada.in):  ಡಿಸಿ ರೋಹಿಣಿ ಸಿಂಧೂರಿ ಅವರಿಗೆ ಕೋವಿಡ್ ಅನುದಾನ ಖರ್ಚಿನ ಲೆಕ್ಕ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹಗೆ ಸಲಹೆ ನೀಡುವ ಮೂಲಕ ಎಂಎಲ್ ಸಿ ಹೆಚ್.ವಿಶ್ವನಾಥ್ ಟಾಂಗ್ ನೀಡಿದ್ದಾರೆ. jk

ಪ್ರತಾಪ್ ಸಿಂಹ ಅವರು ಮೆಂಬರ್ ಆಫ್ ಪಾರ್ಲಿಮೆಂಟ್. ಡಿಸಿ ಅವರ ಬಗ್ಗೆ ಮಾತಾಡುವ ಬಗ್ಗೆ ಸ್ವಲ್ಪ ಗಾಂಭೀರ್ಯತೆ ಇರಲಿ. ಹಾದಿರಂಪ ಬೀದಿರಂಪ ಬಿಡಿ ಎಂದು ಹಳ್ಳಿಹಕ್ಕಿ ಹೆಚ್. ವಿಶ್ವನಾಥ್ ಸಲಹೆ ನೀಡಿದ್ದಾರೆ.

ಮೈಸೂರಿನ ಸಂಸದ ಶ್ರೀನಿವಾಸ್ ಪ್ರಸಾದ್  ನಿವಾಸಕ್ಕೆ ಭೇಟಿ  ನೀಡಿದ ಹೆಚ್.ವಿಶ್ವನಾಥ್. ಶ್ರೀನಿವಾಸ್ ಪ್ರಸಾದ್ ಅವರ ಜೊತೆ ರಾಜಕೀಯ ವಿದ್ಯಮಾನ ಹಾಗೂ ಜಿಲ್ಲಾ ಬೆಳವಣಿಗೆ ಬಗ್ಗೆ ಗೌಪ್ಯ ಮಾತುಕತೆ ನಡೆಸಿದರು.

ನಂತರ ಸಂಸದ ಪ್ರತಾಪ್ ಸಿಂಹ ಡಿಸಿ ರೋಹಿಣಿ ಸಿಂಧೂರಿ ಅವರ ನಡುವಿನ ಜಟಾಪಟಿ ಕುರಿತು ಮಾಧ್ಯಮಗಳ ಜತೆ ಮಾತನಾಡಿ ಹೆಚ್.ವಿಶ್ವನಾಥ್, ನೀವೊಬ್ಬರೇ ಸಂಸದರು ಇಲ್ಲಿ ಇಲ್ಲ. ನಾನು, ಶ್ರೀನಿವಾಸ್ ಪ್ರಸಾದ್, ರಾಮದಾಸ್, ನಾಗೇಂದ್ರ, ತನ್ವೀರ್ ಸೇಠ್ ಇಷ್ಟು ಜನಪ್ರತಿನಿಧಿಗಳು ಕೂಡ ಹಿರಿಯರಿದ್ದೀವಿ‌. ನೀವಿಬ್ಬರೇ ಬೀದಿಯಲ್ಲಿ ಜಗಳ ಆಡಿದರೆ ಹೇಗೆ? ಜಿಲ್ಲಾ ಉಸ್ತುವಾರಿ ಸಚಿವರು ಮೊದಲು ಇದಕ್ಕೆ ಫುಲ್ ಸ್ಟಾಪ್ ಇಡಬೇಕು. ಡಿಸಿ ಅವರನ್ನ ರಸ್ತೆಯಲ್ಲಿ ನಿಂತು ಲೆಕ್ಕ ಕೇಳುವುದು ಸರಿಯಲ್ಲ.ಲೆಕ್ಕ ಕೇಳೋದು ತಪ್ಪಲ್ಲ ಬದಲಿಗೆ ರಸ್ತೆಯಲ್ಲಿ ನಿಂತು ಕೇಳೋದು ತಪ್ಪು. ಮೊದಲು ಈ ಬಗ್ಗೆ ಉಸ್ತುವಾರಿ ಸಚಿವರು ಸಭೆ ಕರೆದು ಈ‌ ಮಾತಾಡಬೇಕು. ನನ್ನನ್ನು ಸೇರಿ, ಎಲ್ಲ ನಾಯಕರನ್ನ ಕರೆದು ಉಸ್ತುವಾರಿ ಸಚಿವರು ಮಾತಾಡಲಿ. ಡಿಸಿ ಆದವರಿಗೆ ಅವರದೇ ಆದ ಒಂದು ಗೌರವ ಇರತ್ತೆ. ಸಂಸದರಿಗೂ ಕೂಡ ಒಂದು ವಿಶೇಷವಾದ ಗೌರವ ಇದೆ. ಆದರೆ ಇಬ್ಬರು ಸಹ ಹಾದಿಬೀದಿಯಲ್ಲಿ ಮಾತನಾಡಬಾರದು ಎಂದು ಹೇಳಿದರು.Union Minister -DV Sadananda Gowda -CT Ravi- statement-criticized – MLC- H Vishwanath

ರಾಜ್ಯದಲ್ಲೂ SSLC, ಪಿಯುಸಿ ಎಕ್ಸಾಂ ರದ್ದಾಗಬೇಕು.

ಇದೇ ವೇಳೆ ರಾಜ್ಯದಲ್ಲೂ SSLC, ಪಿಯುಸಿ ಎಕ್ಸಾಂ ರದ್ದಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ ಹೆಚ್.ವಿಶ್ವನಾಥ್,  ಆರ್.ಟಿ.ಇ ಇರೋದು ಮಕ್ಕಳ‌ ಶಿಕ್ಷಣಕ್ಕೆ ಒತ್ತು ಕೊಡಲು. ಪರೀಕ್ಷೆಗೆ ಒತ್ತು ಕೊಡಲು ಹೊಸ ಶಿಕ್ಷಣ ನೀತಿ ಇಲ್ಲ. ಕೊರೋನಾ 3ನೇ ಅಲೆ ಬರುತ್ತಿರುವುದೇ ಮಕ್ಕಳ‌ ಮೇಲೆ. ಪ್ರಧಾನಿ ಮೋದಿ ಅವರೇ ಇದನ್ನ ಮನಗಂಡು ಪರೀಕ್ಷೆ ರದ್ದು ಮಾಡಿದ್ದಾರೆ. ರಾಜ್ಯದಲ್ಲು ಕೂಡ ರದ್ದಾಗಬೇಕು. ಪರೀಕ್ಷೆಗಿಂತ ಮಕ್ಕಳ ಆರೋಗ್ಯ ಮುಖ್ಯ. ಮೆಡಿಕಲ್ ಹಾಗೂ ಎಂಜಿನಿಯರ್ ಮಾನದಂಡಕ್ಕೆ ಬೇರೆ ಮಾರ್ಗೋಪಾಯ ಬೇಕಿದ್ದರೆ‌ ಹುಡುಕಿಕೊಳ್ಳಿ ಎಂದು ಪರೀಕ್ಷೆ ರದ್ದು ಮಾಡುವಂತೆ ಸಿಎಂಗೆ ಒತ್ತಾಯಿಸಿದರು.

Key words: H.Vishwanath-visit- V. Srinivas Prasad-residence- MP Pratap simha-advice