ಹಾಲಿನ ಡೇರಿ ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ: ಮಾಜಿ ಪ್ರಧಾನಿ ಹೆಚ್.ಡಿಡಿ ಸೇರಿ ಹಲವರು ಭಾಗಿ.

ಮಂಡ್ಯ,ಡಿಸೆಂಬರ್,30,2022(www.justkannada.in): ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ನಿರ್ಮಾಣವಾಗಿರುವ ಮೆಗಾಡೇರಿಯನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದರು.

ಮನ್ ಮುಲ್ ಆವರಣದಲ್ಲಿ 5 ಎಕರೆ ಜಾಗದಲ್ಲಿ ಡೇರಿ ನಿರ್ಮಾಣವಾಗಿದೆ. 260 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣವಾಗಿದ್ದು,  ಕಟ್ಟಡದ ಹೊರ ಬಾಗದಲ್ಲಿ 4 ಬೃಹತ್ ಹಾಲು ಸಂಗ್ರಹಣಾ ಟ್ಯಾಂಕ್ ಇದೆ.  ತಲಾ ಒಂದುವರೆ ಲಕ್ಷ ಲೀಟರ್  ಹಾಲನ್ನ ಸಂಗ್ರಹಿಸುವ ಸಾಮರ್ಥ್ಯವನ್ನ ಹೊಂದಿವೆ. ಇದು ರಾಜ್ಯದ 2ನೇ ಅತಿದೊಡ್ಡ ಮೆಗಾ ಡೈರಿಯಾಗಿದೆ.

ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಡೇರಿ  ಉದ್ಘಾಟನೆ ಮಾಡಿದ್ದು, ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಕೇಂದ್ರಸಚಿವ ಪ್ರಹ್ಲಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಗೋಪಾಲಯ್ಯ, ಎಸ್.ಟಿ ಸೋಮಶೇಖರ್ ಹಾಗೂ ನಿರ್ಮಲಾನಂದ ಸ್ವಾಮೀಜಿಗಳು ಉಪಸ್ಥಿತರಿದ್ದರು.

Key words: Union -Home Minister- Amit Shah- inaugurated – milk dairy-mandya