ಬೈಕ್ ಸೀಜ್ ಮಾಡಿದ ಪೊಲೀಸರು: ದಾಖಲೆ ತರಲು ಹೋದ ಅಪ್ರಾಪ್ತ ಬಾಲಕ ನೇಣಿಗೆ ಶರಣು…

ಮೈಸೂರು,ಜೂ,30,2020(www.justkannada.in): ಅಪ್ರಾಪ್ತ ಬಾಲಕನೋರ್ವ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ದರ್ಶನ್ (17) ನೇಣಿಗೆ ಶರಣಾದ ಬಾಲಕ.  ಆತ್ಮಹತ್ಯೆಗೆ ಶರಣಾದ ಬಾಲಕ ನಗರದ ಸುಣ್ಣದಕೇರಿ ನಿವಾಸಿ. ಅಪ್ರಾಪ್ತ ಬಾಲಕ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಬೈಕ್ ನ ಹಿಂಬದಿ ನಂ ಫ್ಲೇಟ್ ಇಲ್ಲದ ಕಾರಣ  ಪೊಲೀಸರು ಬೈಕ್ ವಶ ಪಡಿಸಿಕೊಂಡಿದ್ದರು. ಕೆ ಆರ್  ಠಾಣಾ ಪೋಲೀಸರು ನಂಜುಮಳಿಗೆ ವೃತ್ತದಲ್ಲಿ ಬೈಕ್ ಸೀಜ್ ಮಾಡಿದ್ದರು.mysore-boy- succide-police-bike-sieze

ಬಳಿಕ ಬಾಲಕನಿಗೆ ದಾಖಲೆ ಸಮೇತ ಠಾಣೆಗೆ ಬಂದು ವಾಹನ ಹಿಂಪಡಯುವಂತೆ ಬೀಟ್ ಪೋಲಿಸರು ಸೂಚಿಸಿದ್ದರು. ಆದರೆ ದಾಖಲೆ ತರಲು ಹೋದ ಬಾಲಕ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಾಲಕ ಆತ್ಮಹತ್ಯೆ ಬಗ್ಗೆ ಕೆ ಆರ್ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಕನ ಸಾವಿನ ನಿಖರ ಕಾರಣ ತನಿಖೆ ನಂತರವಷ್ಠೆ ತಿಳಿಯಲಿದೆ‌.

Key words: mysore-boy- succide-police-bike-sieze