ಅನ್ ಲಾಕ್ 2.0: ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ…

ಬೆಂಗಳೂರು,ಜೂ,30,2020(www.justkannada.in):  ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಬೆನ್ನಲ್ಲೆ ಕೇಂದ್ರದ ಮಾದರಿಯಲ್ಲಿ ರಾಜ್ಯ ಸರ್ಕಾರ ಅನ್ ಲಾಕ್ 2.0ರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಜುಲೈ 1ರಿಂದ ಜುಲೈ 31ರವರೆಗೆ ಅನ್ ಲಾಕ್ ಜಾರಿಯಲ್ಲಿದ್ದು  ಕೇಂದ್ರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಯಥಾವತ್ತು  ಅನುಷ್ಠಾನಕ್ಕೆ ತರಲು ಮುಂದಾಗಿದೆ. Unlock 2.0- Release -Guidelines - State Government.

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿ ಈ ಕೆಳಕಂಡಂತಿದೆ.

ಧಾರ್ಮಿಕ, ರಾಜಕೀಯ ಸಭೆ ಸಮಾರಂಭಕ್ಕೆ ನಿರ್ಬಂಧ.

ರಾತ್ರಿ 8ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ.

ಜುಲೈ5 ರಿಂದ ಮುಂದಿನ 5 ಭಾನುವಾರ ಲಾಕ್ ಡೌನ್.

ಜುಲೈ 31ರವರೆಗೆ ಮೆಟ್ರೋ, ಜಿಮ್ ಚಿತ್ರಮಂದಿರ ಬಂದ್. ಶಾಲಾಕಾಲೇಜು ತೆರೆಯುವಂತಿಲ್ಲ.

ಅಂತರಾಷ್ಟ್ರೀಯ ವಿಮಾನಯಾನ ಬಂದ್.

ಮನೋರಂಜನಾ ಪಾರ್ಕ್ ಗಳಿಗೆ ಅವಕಾಶವಿಲ್ಲ.

ಮದುವೆಗೆ 50 ಮಂದಿ ಮಾತ್ರ ಭಾಗಿಯಾಗಲು ಅವಕಾಶ.

ಮಾಸ್ಕ್ ಧರಿಸದಿದ್ದರೇ ಪಾಲಿಕೆ ವ್ಯಾಪ್ತಿಯಲ್ಲಿ 200 ರೂ. ಇತರೆ ಕಡೆಗಳಲ್ಲಿ 100 ರೂ ದಂಡ.

Key words: Unlock 2.0- Release -Guidelines – State Government.