ನಾನು ಯಾರ ಮನೆಯಲ್ಲೂ ಚಡ್ಡಿ ತೊಳೆದಿಲ್ಲ, ಏಯ್ ಅಯೋಗ್ಯ ಯಾರ ಬಗ್ಗೆ ಮಾತನಾಡ್ತೀಯಾ….: ಸಾರಾ ಮಹೇಶ್ ವಿರುದ್ಧ ಎಚ್.ವಿಶ್ವನಾಥ್ ಟೀಕಾ ಪ್ರಹಾರ

Promotion

ಮೈಸೂರು, ಸೆಪ್ಟೆಂಬರ್ 22, 2019 (www.justkannada.in): ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಮಾಜಿ ಸಚಿವ ಸಾ.ರಾ ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವೈಯಕ್ತಿಯ ಹಾಗೂ ಏಕ ವಚನ ಬಳಸಿ ಟೀಕಾ ಪ್ರಹಾರ ನಡೆಸಿದ್ದಾರೆ.

ನಾವು ಜಮಿನ್ದಾರು. ನಮ್ಮದು ಶ್ರೀಮಂತ ಕುಟುಂಬ. ನಾನು ಇಲ್ಲಿ ಎಲ್ಲೋ ಫಿಲಂ ಮಾಡಿಲ್ಲ. ಯಾರ ಮನೆಯ ಎಂಜಲು ತೊಳೆದಿಲ್ಲ. ರಾಮದಾಸ್ ಮನೆಯಲ್ಲಿ ಚಡ್ಡಿ ಒಗೆದಿಲ್ಲ. ನಾನು ನನ್ನ ಸಂಸಾರ ಉಳಿಸಲು ಮಾರಾಟ ಆದೆ ಅನ್ನೊ ಮಾತನ್ನ ಆಡಬೇಡ. ಹೇ ಆಯೋಗ್ಯ ಯಾರ ಬಗ್ಗೆ ಮಾತನಾಡ್ತಿಯಾ? ಎಂದು ಸಾರಾ ಮಹೇಶ್ ಕುರಿತು ವೈಯಕ್ತಿಕವಾಗಿ ಟೀಕೆ ಮಾಡಿದ್ದಾರೆ.

ಹೀಗಿತ್ತು ಎಚ್ವಿ ಟೀಕಾ ಪ್ರಹಾರ…

– ಏನಾದ್ರು ಇದ್ರೆ ಬಹಿರಂಗ ಚರ್ಚೆಗೆ ಬಾ. ಕುಮಾರಸ್ವಾಮಿ ನೋಡಿದ್ರೆ ಅಯ್ಯೋ ಪಾಪ ಅನ್ಸುತ್ತೆ. ನಿಮ್ಮ ಹಿಂದೆ ಇಂದು ಯಾರು ಇಲ್ಲ.

– ಜಿಟಿಡಿ ನಿಮ್ಮ ನಾಯಕರೇ . ಅವರ ಬಗ್ಗೆ ಲಘುವಾಗಿ ಮಾತನಾಡ ಬೇಡಿ. ಅವರು ಸಿಟಿಂಗ್ ಸಿಎಂ ಸೋಲಿಸಿದ್ದಾರೆ. ಸಿದ್ದರಾಮಯ್ಯ ಕೂಡ ಈ ರಾಜ್ಯದ ಸಿಎಂ ಆಗಿದ್ದವರು. ಯಾರ ಬಗ್ಗೆ ಆದ್ರು ಮಾತನಾಡುವಾಗ ಹಗುರವಾಗಿ ಮಾತನಾಡಬೇಡಿ.