ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಧ್ಯವರ್ತಿಗಳ ನಡುವೆ ಮಾರಮಾರಿ: ಬೆಚ್ಚಿಬಿದ್ದ ಭಕ್ತರು..

ಮೈಸೂರು,ಅ,28,2019(www.justkannada.in):  ಗ್ರಾಹಕರನ್ನು ಸೆಳೆಯುವ ವಿಚಾರದಲ್ಲಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಧ್ಯವರ್ತಿಗಳ ನಡುವೆ ಮಾರಮಾರಿ ನಡೆದಿದ್ದು ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

ಚಾಮುಂಡಿ ಬೆಟ್ಟಕ್ಕೆ ಬರುವ ಪ್ರವಾಸಿಗರನ್ನು ದೊಡ್ಡ ಅಂಗಡಿಗಳಿಗೆ ಕರೆಯ್ಯುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿರುವ ಗಲಾಟೆ ನಡೆದಿದೆ ಎನ್ನಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ಕಮೀಷನ್ ಆಸೆಗಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಮಧ್ಯವರ್ತಿಗಳ ನಡುವೆ ಪೈಪೋಟಿ ಇದ್ದು ಈ ವಿಚಾರಕ್ಕಾಗಿ ಮಧ್ಯವರ್ತಿಗಳು ಮಾತಿನ ಚಕಮಕಿಗಿಳಿದಿದ್ದಾರೆ.

ಈ ವೇಳೆ ಪರಸ್ಪರ ಹೊಡೆದಾಟಕ್ಕೆ ತಿರುಗಿದ್ದು, ಮಧ್ಯವರ್ತಿಗಳು ಸಾರ್ವಜನಿಕವಾಗಿ ರಸ್ತೆಯಲ್ಲಿಯೇ ಹೊಡೆದಾಡಿ ಕೊಂಡಿಕೊಂಡಿದ್ದಾರೆ. ಮದ್ಯವತ್ರಿಗಳ ಮಾರಾಮಾರಿ ದೃಶ್ಯ ಸಾರ್ವಜನಿಕರ ಮೊಬೈಲ್ ನಲ್ಲಿ ದೃಶ್ಯಗಳು ಸೆರೆಯಾಗಿದೆ. ಮಧ್ಯವರ್ತಿಗಳ  ಗಲಾಟೆ ಕಂಡು ಸಾರ್ವಜನಿಕರು ಹಾಗೂ ಭಕ್ತರು ಬೆಚ್ಚಿಬಿದ್ದರು.

ಈ ಮೂಲಕ ಮಧ್ಯವರ್ತಿಗಳ ಹಾವಳಿ ಸಾರ್ವಜನಿಕರಿಗೆ ಆಗಾಗ್ಗೆ ಕಿರಿಕಿರಿ ತರುತ್ತಿದ್ದು, ಇಷ್ಟಾದರೂ ಪೊಲೀಸರು ಮಾತ್ರ ಮಧ್ಯವರ್ತಿಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿಲ್ಲ  ಎಂಬುದು ಸಾರ್ವಜನಿಕರ ಆಕ್ರೋಶ.

Key words: mysore- chamundi hills- Uproar- Uproar- Intermediaries