ರಾಜ್ಯದಲ್ಲಿ ಜು.31ರೊಳಗೆ ಸರ್ಕಾರ ರಚನೆಯಾಗದಿದ್ದರೇ ಹಣಕಾಸು ಬಿಕ್ಕಟ್ಟು:  ರಾಷ್ಟ್ರಪತಿ ಆಳ್ವಿಕೆ ಸಂಭವ-ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ

ಬೆಂಗಳೂರು,ಜು,25,2019(www.justkannada.in): ಜುಲೈ 31ರೊಳಗೆ ಸರ್ಕಾರ ರಚನೆಯಾಗಿದ್ದರೇ  ಧನವಿನಿಯೋಗ ಮಸೂದೆ ಪಾಸ್ ಆಗಲ್ಲ.  ರಾಜ್ಯದಲ್ಲಿ ಹಣಕಾಸು ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಂಭವವಿರುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸ್ಪೀಕರ್ ರಮೇಶ್  ಕುಮಾರ್, ಜುಲೈ31 ರೊಳಗೆ ಧನವಿನಿಯೋಗ ಮಸೂದೆ ಪಾಸ್ ಆಗಬನೇಕು. ಸರ್ಕಾರ ರಚನೆಯಾಗದಿದ್ದರೇ ವಿಧೇಯಕ ಅಂಗೀಕಾರವಾಗಲ್ಲ. ವಿಧೇಯಕ  ವಿಧೇಯಕ ಅಂಗೀಕಾರವಾಗದಿದ್ದರೇ ಸರ್ಕಾರ ಸ್ಥಗಿತವಾಗುತ್ತೆ. ಸರ್ಕಾರಿ ನೌಕರರಿಗೂ  ಸಂಬಳ ನೀಡಲು ಹಣ ಇರುವುದಿಲ್ಲ. ಇದರಿಂದಾಗಿ ಹಣಕಾಸು ವಿಚಾರದಲ್ಲಿ ಸಮಸ್ಯೆ ಎದುರಾಗುವ ಅಪಾಯವಿದೆ. ಸರಕಾರದ ಬೊಕ್ಕಸದಿಂದ ಒಂದು ರೂಪಾಯಿ ಕೂಡಾ ಡ್ರಾ ಮಾಡಲು ಆಗುವುದಿಲ್ಲ. ಸರಕಾರಿ ನೌಕರರಿಗೆ ಸಂಬಳವಿಲ್ಲದೆ ಒದ್ದಾಡಬೇಕಾದ ಸ್ಥಿತಿ ಎದುರಾಗಲಿದೆ ಎಂದು ತಿಳಿಸಿದರು.

ಹಾಗೆಯೇ ಅತೃಪ್ತ ಶಾಸಕರು ರಾಜೀನಾಮೆ ನೀಡಿದಾಗ  ಅರ್ಟಿಕಲ್ 190ರ ಪ್ರಕಾರ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದೇನೆ. ನೋಟೀಸ್ ನೀಡಿದ್ದರೂ ಅವರು ಬಂದಿಲ್ಲ. ಹೀಗಾಗಿ ಮತ್ತೆ ಮತ್ತೆ ನೋಟೀಸ್ ನೀಡೋಕೆ ನಮಗೇನು ಕೆಲಸ ಇಲ್ವ. ಕಾನೂನು ಎಲ್ಲರಿಗೂ ಒಂದೇ.  ಈಗಾಗಲೇ ನೋಟೀಸ್ ನೀಡಲಾಗಿದೆ. ಇನ್ನೇನಿದ್ದರೂ ತೀರ್ಪು ಅಷ್ಟೆ. ನಾನು  ಸುಪ್ರೀಂಕೋರ್ಟ್ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದರು.

Key words: financial crisis – government – not formed -July 31-speaker -Ramesh Kumar