Tuesday, August 4, 2026

BDA Apartments

Home Front Page ಪ್ರಸ್ತುತ ಪರಿಸ್ಥಿತಿಯಲ್ಲಿ ಯಾರೂ ಸುಭದ್ರ ಸರ್ಕಾರ ನೀಡಲು ಸಾಧ್ಯವಿಲ್ಲ- ಬಿಜೆಪಿಗೆ ಟಾಂಗ್ ಕೊಟ್ಟ  ಉಸ್ತುವಾರಿ ಸಿಎಂ...

ಪ್ರಸ್ತುತ ಪರಿಸ್ಥಿತಿಯಲ್ಲಿ ಯಾರೂ ಸುಭದ್ರ ಸರ್ಕಾರ ನೀಡಲು ಸಾಧ್ಯವಿಲ್ಲ- ಬಿಜೆಪಿಗೆ ಟಾಂಗ್ ಕೊಟ್ಟ  ಉಸ್ತುವಾರಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು,ಜು,25,2019(www.justkannada.in):  ಸದ್ಯದ ಪರಿಸ್ಥಿತಿಯಲ್ಲಿ ಯಾರೂ ಸುಭದ್ರ ಆಡಳಿತ ನೀಡಲು ಆಗುವುದಿಲ್ಲ. ಬಿಜೆಪಿಯಿಂದ ಸ್ಥಿರ ಸರ್ಕಾರ ಅಸಾಧ್ಯ ಎಂದು ಉಸ್ತುವಾರಿ ಸಿಎಂ ಹೆಚ್,ಡಿ ಕುಮಾರಸ್ವಾಮಿ ಭವಿಷ್ಯ ನುಡಿದರು.

ಮಾಜಿ ಸಚಿವ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ನಿವಾಸಕ್ಕೆ ಭೇಟಿ ನೀಡಿ ಸುಮಾರು ಒಂದು ಗಂಟೆಗಳ ಕಾಲ  ಚರ್ಚೆ ನಡೆಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ರಾಮಲಿಂಗರೆಡ್ಡಿ ಅವರು ಸಹ ರಾಜೀನಾಮೆ ನಿಡಿದ್ದರು. ರಾಜೀನಾಮೆ ವಾಪಸ್ ಪಡೆಯಲು ಮನವಿ ಮಾಡಿದ್ದದರು. ನಮ್ಮ ಮನವಿ ಬೆಲೆ ಕೊಟ್ಟು ರಾಜೀನಾಮೆ ವಾಪಸ್ ಪಡೆದರು ಎಂದು ಹೇಳಿದರು.

ಹಾಗೆಯೇ  ರಾಮಲಿಂಗಾರೆಡ್ಡಿಯವರು ನಿಷ್ಠಾವಂತ ಕಾಂಗ್ರೆಸ್ಸಿಗರು, ನಾನು ಅವರ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಮಾತನಾಡಬೇಕಿತ್ತು. ಆದರೆ ಕಲಾಪದಲ್ಲಿ ಮಾತನಾಡಲು ಸಾಧ್ಯವಾಗಲಿಲ್ಲ.  ಹೀಗಾಗಿ ಇಂದು ಖುದ್ದು ಅವರನ್ನ  ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದೇನೆ ಎಂದು ಹೆಚ್,ಡಿ ಕುಮಾರಸ್ವಾಮಿ ತಿಳಿಸಿದರು.

Key words: present –situation- secure government-HD Kumaraswamy – BJP