ಕೋಮುವಾದಿ ಆರ್ ಎಸ್‌ಎಸ್’ನಿಂದ ದೇಶ ವಿಭಜನೆ ಕೆಲಸ: ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ

Promotion

ಬೆಂಗಳೂರು, ಅಕ್ಟೋಬರ್ 17, 2020 (www.justkannada.in): ಆರ್ ಎಸ್‌ಎಸ್ ಕೋಮುವಾದಿ ಸಂಘಟನೆ, ಅಲ್ಪಸಂಖ್ಯಾತರ ವಿರೋಧಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಎಸ್‌ಎಸ್ ಮನಸ್ಮೃತಿ, ಶ್ರೇಣಿಕೃತ ಸಂಘಟನೆ, ದೇಶ ವಿಭಜನೆ ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವ, ಭಾತೃತ್ವ, ಸರ್ವಧರ್ಮ ಸಂಹಿಷ್ಣುತೆಯ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಆರ್ ಎಸ್‌ಎಸ್ ಕೋಮುವಾದಿ ಸಂಘಟನೆಯಾಗಿದ್ದು, ಅಲ್ಪಸಂಖ್ಯಾತರ ವಿರೋಧಿಯಾಗಿದೆ. ಇನ್ನು ಬಿಜೆಪಿಯಲ್ಲಿ ಯಾರಾದರೂ ಮುಸ್ಲಿಂ, ಕ್ರಿಶ್ಚಿಯನ್ ನಾಯಕರು ಇದ್ದಾರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.