ಕಾಲೇಜುಗಳ ರಜೆ ಮುಂದುವರಿಕೆ ಬಗ್ಗೆ ಸಂಜೆ ತೀರ್ಮಾನ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಫೆಬ್ರವರಿ,10,2022(www.justkannada.in):  ರಾಜ್ಯದಲ್ಲಿ ಹಿಜಾಬ್ ಕೇಸರಿ ಶಾಲು ವಿವಾದ ಜೋರಾದ ಹಿನ್ನೆಲೆ ಪ್ರೌಢ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಾಳೆ  ರಜೆ ಮುಗಿಯಲಿದ್ದು ಈ ಹಿನ್ನೆಲೆಯಲ್ಲಿ ರಜೆ ಮುಂದುವರೆಸುವ ಬಗ್ಗೆ ಇಂದು  ಸಂಜೆ ನಿರ್ಧಾರ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹೊರಗಡೆಯವರು ಪ್ರಚೋದನೆ ನೀಡುತ್ತಿದ್ದಾರೆ. ಯಾರೂ ಪ್ರಚೂದನೆ ನೀಡಬಾರದು ಎಲ್ಲರೂ ಶಾಂತಿಯಿಂದ ವರ್ತಿಸೋಣ. ಪ್ರಕರಣ ಕೋರ್ಟ್ ನಲ್ಲಿರುವುದರಿಂದ ಕಾಯೋಣ ಎಂದರು.

ಹಿಜಾಬ್ ವಿವಾದ ಸಂಬಂಧ ಹಲವರು ಹೇಳಿಕೆ ಕೊಟ್ಟಿದ್ದಾರೆ.  ಇನ್ಮುಂದೆ ಯಾರೂ ಹೇಳಿಕೆ ಕೊಡಬೇಡಿ ಎಂದು ಮನವಿ ಮಾಡಿದ ಸಿಎಂ ಬೊಮ್ಮಾಯಿ, ಇಂದು ಸಂಜೆ ಶಿಕ್ಷಣ ಸಚಿವರು ಅಧಿಕಾರಿಗಳ ಜತೆ ಸಭೆ ನಡೆಸುತ್ತೇನೆ. ಈ ಬೆಳವಣಿಗೆಗಳ ಬಗ್ಗೆ ಗೃಹ ಸಚಿವರ ಜತೆಯೂ ಚರ್ಚೆ  ಮಾಡುತ್ತೇನೆ. ಮೊದಲಿನಂತೆ ಸೌಹಾರ್ದತೆ ಶಿಸ್ತು ಮೂಡಿಸಲು ಕ್ರಮ ಕೈಗೊಳ್ಳುತ್ತೇವೆ.  ರಜೆ ಮುಂದುವರಿಕೆ ಬಗ್ಗೆ ಸಂಜೆ ನಿರ್ಧಾರ ಮಾಡುತ್ತೇವೆ. ಮಕ್ಕಳ ವಿಚಾರದಲ್ಲಿ ಸಂವೇದನಾಶೀಲರಾಗಬೇಕು ಎಂದರು.

Key words: decision –college-holiday -CM Basavaraja Bommai