Sunday, August 23, 2026

BDA Apartments

Home Front Page ಮಾಜಿ ಮುಖ್ಯಮಂತ್ರಿ ‌ಹೆಚ್.ಡಿ.ಕುಮಾರಸ್ವಾಮಿಗೆ ‌ಸಿ.ಟಿ.ರವಿ ಟಾಂಗ್ ಕೊಟ್ಟ ಬಗೆ ಹೀಗೆ…

ಮಾಜಿ ಮುಖ್ಯಮಂತ್ರಿ ‌ಹೆಚ್.ಡಿ.ಕುಮಾರಸ್ವಾಮಿಗೆ ‌ಸಿ.ಟಿ.ರವಿ ಟಾಂಗ್ ಕೊಟ್ಟ ಬಗೆ ಹೀಗೆ…

ಬೆಂಗಳೂರು, ಅಕ್ಟೋಬರ್ 17, 2020 (www.justkannada.in):  ಮಾಜಿ ಮುಖ್ಯಮಂತ್ರಿ ‌ಹೆಚ್.ಡಿ.ಕುಮಾರಸ್ವಾಮಿ ‌ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ‌ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ಎಚ್ಡಿಕೆ ಆರ್ ಎಸ್ ಎಸ್ ಸೇವಾ ಕಾರ್ಯದ ಕುರಿತು ಮಾಡಿರುವ ಟೀಕೆಗಳಿಗೆ ಟ್ವೀಟ್ಟರ್ ನಲ್ಲಿ ತಿರುಗೇಟು ನೀಡಿರುವ ಸಿ.ಟಿ.ರವಿ, ಕನಕಪುರದ ಗೋಗೆರೆದೊಡ್ಡಿಯ ಯಶವಂತ್‌ಗೌಡ ರಾಷ್ಟ್ರೋತ್ತಾನ ಪರಿಷತ್‌ನಲ್ಲಿ ಉಚಿತ ತರಬೇತಿ ಪಡೆದು ಐಐಟಿ ಪ್ರವೇಶಿಸಿ ಸಾಧನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭೆಗಳಿಗೆ ತಕ್ಕ ಮನ್ನಣೆಯನ್ನು ರಾಷ್ಟ್ರೋತ್ತಾನ ಪರಿಷತ್‌ ನೀಡುತ್ತಿದೆ. ಐಐಟಿ ಪ್ರವೇಶ ಪಡೆಯಲು ಲಕ್ಷಗಟ್ಟಲೆ ಖರ್ಚು ಮಾಡಬೇಕು. ಆರ್ಎಸ್ಎಸ್ ಅಂಗವಾದ ರಾಷ್ಟೋತ್ತಾನ ಪರಿಷತ್‌ ವಿದ್ಯಾರ್ಥಿಗಳ ಪಾಲಿಗೆ ಕಾಮಧೇನುವಾಗಿದೆ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಆರ್ ಎಸ್ಎಸ್ ಟೀಕೆ ಮಾಡುತ್ತಾ ಜನರ ಮೂಗಿಗೆ ತುಪ್ಪಸವರುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳಲು ಹರಸಾಹಸ ಪಡುತ್ತಿರುವ ನಾಯಕರೊಬ್ಬರು ಕಣ್ಣುತೆರೆದು ನೋಡಿದರೆ ಒಳ್ಳೆಯದು ಎಂದು ಟಾಂಗ್ ನೀಡಿದ್ದಾರೆ.