ಪಿಎಫ್ ಐ ಬ್ಯಾನ್ ಮಾಡುವುದಕ್ಕೆ ನಿಖರ ಸಾಕ್ಷಿಗಳನ್ನು ಜನರ ಮುಂದೆ ಇಡಿ- ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ.

ಮೈಸೂರು,ಸೆಪ್ಟಂಬರ್,28,2022(www.justkannada.in): ಪಿಎಫ್ ಐ ಸಂಘಟನೆ ಬ್ಯಾನ್ ಮಾಡುವುದಕ್ಕೆ ನಿಖರ ಸಾಕ್ಷಿಗಳನ್ನು ಜನರ ಮುಂದೆ ಇಡಿ ಎಂದು ಸರ್ಕಾರಕ್ಕೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಆಗ್ರಹಿಸಿದ್ದಾರೆ.

ಪಿಎಫ್ಐ ಬ್ಯಾನ್ ವಿಚಾರ ಕುರಿತು ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಹಿಂದೂ ಧರ್ಮದ ಸಂಘಟನೆ ಹೆಸರಲ್ಲಿ ಆರ್ ಎಸ್ ಎಸ್ ಇದೆ. ಅಲ್ಪಸಂಖ್ಯಾತರ ರಕ್ಷಣೆ ಹೆಸರಲ್ಲಿ ಪಿಎಫ್ ಐ ಇದೆ. ವಲ್ಲಾಭಾಯಿ ಪಟೇಲ್, ಇಂದಿರಾಗಾಂಧಿ ಅಂದು ಆರ್ ಎಸ್ ಎಸ್ ಸಂಘಟನೆ ನಿರ್ಬಂಧಿಸಿದ್ದರು. ಆರ್ ಎಸ್ ಎಸ್ ಮತೀಯ ಸಂಘಟನೆ ಅಂತಾ ಬ್ಯಾನ್ ಮಾಡಲಾಗಿತ್ತು. ಈಗ ಕೇಂದ್ರ ಸರಕಾರ ಪಿಎಫ್ ಐ ಬ್ಯಾನ್ ಮಾಡಿದೆ. ಧರ್ಮದ ಹೆಸರಿನಲ್ಲಿ ಭಯ ಉಂಟು ಮಾಡಿ ಸಂವಿಧಾನಕ್ಕೆ ಸವಾಲು ಹಾಕುವಂತಹ ಯಾವುದೇ ಸಂಘಟನೆ ಇದ್ದರು ನಿಷಿದ್ದ ಮಾಡುವುದು ಸರಿ. ನಿಷಿದ್ದ ಮಾಡುವುದಕ್ಕೆ ಸಂವಿಧಾನದಲ್ಲಿ ಎಲ್ಲಾ ಅವಕಾಶವಿದೆ ಎಂದರು.

ದೇಶದಲ್ಲಿ ಈಗ ಧರ್ಮ ಆಧಾರಿತ ರಾಜಕಾರಣ ನಡೆಯುತ್ತಿದೆ. ಭಯದ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ಪಿಎಫ್ ಐ ಸಂಘಟನೆ ಬ್ಯಾನ್ ಮಾಡುವುದಕ್ಕೆ ನಿಖರ ಸಾಕ್ಷಿಗಳನ್ನು ಜನರ ಮುಂದೆ ಇಡಿ. ದೇಶ ದ್ರೋಹದ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರು ಬ್ಯಾನ್ ಮಾಡಿ. ಧರ್ಮ ಆಧಾರಿತವಾಗಿ ದೇಶದ ಅಖಂಡತೆಗೆ ಧಕ್ಕೆ ಮಾಡುವ ಹಾಗೂ ಧರ್ಮದಿಂದ ಭಯ ಸೃಷ್ಟಿ ಮಾಡುವ ಸಂಘಟನೆಗಳನ್ನು ಬ್ಯಾನ್ ಮಾಡಿ ಎಂದು ಹೆಚ್.ಸಿ ಮಹದೇವಪ್ಪ ತಿಳಿಸಿದರು.

Key words: evidence – people – ban- PFI- Former minister -HC Mahadevappa-mysore