ಪಿಎಫ್ ಐ  ನಿಷೇಧ ಕುರಿತು ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯೆ ಏನು..?

ಮೈಸೂರು,ಸೆಪ್ಟಂಬರ್,28,2022(www.justkannada.in):  ಐದು ವರ್ಷಗಳ ಕಾಲ ಪಿಎಫ್ ಐ ಮತ್ತು ಸಹ ಸಂಘಟನೆಗಳನ್ನ ಕೇಂದ್ರ ಸರ್ಕಾರ ನಿಷೇಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಶಾಸಕ ತನ್ವೀರ್ ಸೇಠ್,  ದೇಶದ ಆತಂರೀಕ ಭದ್ರತೆಗೆ ಭಂಗ ತರುವಂತ ಯಾವುದೇ ಶಕ್ತಿಗಳೇ ಆಗಲಿ ಅದನ್ನು ನಿಷೇಧ ಮಾಡುವುದು ಸ್ವಾಗತಾರ್ಹ. ಆದರೆ ಅದು ಕೇವಲ ಒಂದು ಜಾತಿ ಧರ್ಮಗಳನ್ನ  ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ನಿಷೇಧ ಮಾಡುವುದು ಸರಿಯಲ್ಲ.

ಈಗ ಎನ್ಐಎ ದಾಳಿ ಮಾಡಿ ಹಲವರನ್ನು ಬಂಧಿಸಿದೆ ಅವರು ನಿಜವಾಗಿಯೂ ದೇಶದ್ರೋಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ರಾ, ಅವರ ಪೂರ್ವಾಪರಗಳ ಬಗ್ಗೆ ಸರ್ಕಾರ ಜನರ ಮುಂದೆ ಇಟ್ಟು ನಂತರ ಕ್ರಮ ಜರುಗಿಸಬೇಕು ಎಂದು  ತನ್ವೀರ್ ಸೇಠ್ ತಿಳಿಸಿದ್ದಾರೆ.

Key words: MLA- Tanveer Sait- reaction -PFI -ban