ಮೈಸೂರಿನಲ್ಲೊಂದು ಗ್ಯಾಂಗ್ ರೇಪ್: ಪ್ರೇಮಿಗಳ ಮೇಲೆ ಹಲ್ಲೆ ನಡೆಸಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ…

0
1118

ಮೈಸೂರು,ಮೇ,7,2019(www.justkannada.in): ಏಕಾಂತದಲ್ಲಿದ್ದ ಪ್ರೇಮಿಗಳ ಮೇಲೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಆತಂಕಕಾರಿ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಲಿಂಗಾಂಬುದ್ದಿ ಕೆರೆ ಸಮೀಪದ ನಿರ್ಜನ‌ ಪ್ರದೇಶದಲ್ಲಿ ನಿನ್ನೆ ತಡರಾತ್ರಿ 10 ಗಂಟೆ ವೇಳೆ  ಈ ಘಟನೆ ನಡೆದಿದೆ. ಮೈಸೂರಿನ ಕೆ.ಜಿ. ಕೊಪ್ಪಲಿನಲ್ಲಿ ವಾಸವಿದ್ದ ಶಿವಸಿದ್ದು ಮೇಲೆಯೇ ದುಷ್ಕರ್ಮಿಗಳು ಹಲ್ಲೆ ಮಾಡಿ ಈಕೆ ಜತೆಗಿದ್ದ ಪ್ರೇಯಸಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಮೂಲತಃ ಎಚ್.ಡಿ. ಕೋಟೆ ಹ್ಯಾಂಡ್ ಪೋಸ್ಟ್ ನಿವಾಸಿ ಶಿವಸಿದ್ದು ಮತ್ತು ಈಕೆಯ ಪ್ರೇಯಸಿ ನಿನ್ನೆ ರಾತ್ರಿ ಮೈಸೂರಿನ ಲಿಂಗಾಂಬುದ್ದಿ ಕೆರೆ ಸಮೀಪ ಏಕಾಂತದಲ್ಲಿದ್ದರು. ಈ ವೇಳೆ ಅಲ್ಲಿದ್ದ ದುಷ್ಕರ್ಮಿಗಳು ಶಿವಸಿದ್ದು ಅವರ ಮೇಲೆ ಹಲ್ಲೆ ನಡೆಸಿ ಬಳಿಕ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದಾರೆ ಎನ್ನಲಾಗಿದೆ.

ಜತೆಗೆ ಯುವಕನ ಕಾಲಿನ ಮೇಲೆ ಕಲ್ಲು ಎತ್ತಿ ಹಾಕಿ ತಲೆಗೆ ಕಲ್ಲಿನಿಂದ ಹೊಡೆದು ಗಾಯ ಮಾಡಿದ್ದಾರೆ,ಇನ್ನು ಅತ್ಯಾಚಾರಕ್ಕೊಳಗಾದ  ಯುವತಿ ಸ್ಥಿತಿ ಗಂಭೀರ ಸ್ಥಿತಿಯಲ್ಲಿರುವ ಯುವತಿಗೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಈ ಕುರಿತು ಮಾತನಾಡಿರುವ  ಮೈಸೂರಿನ ಎಸ್ಪಿ ಅಮಿತ್ ಸಿಂಗ್, ಮೈಸೂರಿನ ಹೊರವಲಯದಲ್ಲಿ ಮಹಿಳೆ ಮೇಲೆ ಅತ್ಯಾಚಾರವಾಗಿದೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಎಎಸ್ಪಿ ನೇತೃತ್ವದಲ್ಲಿ 8 ತಂಡಗಳನ್ನು ರಚನೆ ಮಾಡಿ ಆರೋಪಿಗಳಿಗೆ ಬಲೆ ಬೀಸಿದ್ದೇವೆ. ಕೃತ್ಯದ ವೇಳೆ ಮೂರ್ನಾಲ್ಕು ಮಂದಿ ಇದ್ದರು ಎಂದು ಹೇಳಿಕೆಯಿಂದ ತಿಳಿದುಬಂದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದೇವೆ. ಪರಿಚಿತರಿಗೆ ಹಣ ಕೊಡಲು ತೆರಳಿದ್ದ ವೇಳೆ ಮೂತ್ರ ವಿಸರ್ಜನೆಗೆ ಬೈಕ್ ನಿಲ್ಲಿಸಿದ ವೇಳೆ ಘಟನೆ ನಡೆದಿದೆ. ಅತ್ಯಾಚಾರಕ್ಕೆ ಒಳಗಾದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಯುವಕನಿಗೆ ಹಲ್ಲೆ ಮಾಡಲಾಗಿದೆ. ಕಾಲಿನ‌ ಮೇಲೆ ಕಲ್ಲುನ್ನು ಎತ್ತಿ ಹಾಕಿದ್ದಾರೆ. ಹಣೆ ಭಾಗದಲ್ಲಿ ಗಾಯವಾಗಿದೆ ಎಂದು ಮಾಹಿತಿ ನೀಡಿದರು.

Key words:gang rapes – Mysore-Woman- raped,