ಮಾಜಿ ಸಚಿವ ಕೆ.ಜೆ ಜಾರ್ಜ್ ಮತ್ತು ಅವರ ಕುಟುಂಬಸ್ಥರಿಗೆ ಇಡಿ ಸಮನ್ಸ್….

ಬೆಂಗಳೂರು, ಜ,14,2020(www.justkannada.in):  ಮಾಜಿ ಸಚಿವ ಕೆ. ಜೆ. ಜಾರ್ಜ್‌ಗೆ ಇದೀಗ ಸಂಕಷ್ಟ ಎದುರಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

ಕಾಂಗ್ರೆಸ್ ನಾಯಕ ಕೆ.ಜೆ ಜಾರ್ಜ್ ಮತ್ತು ಮತ್ತು ಅವರ ಕುಟುಂಬಸ್ಥರಿಗೆ ಜನವರಿ 16 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ.  ಡಿ. ಕೆ. ಶಿವಕುಮಾರ್ ಬಳಿಕ ಮತ್ತೊಬ್ಬ ಕಾಂಗ್ರೆಸ್ ಪ್ರಭಾವಿ ನಾಯಕರಿಗೆ ಇಡಿ ಸಂಕಷ್ಟ ಎದುರಾಗಿದೆ. ಮಾಜಿ ಸಚಿವ ಕೆ. ಜೆ. ಜಾರ್ಜ್, ಜಾರ್ಜ್ ಪತ್ನಿ, ಪುತ್ರಿ ರೇನಿತಾ, ಪುತ್ರ ರಾಣಾಗೆ ಸಮನ್ಸ್ ನೀಡಿದೆ.

ಕಳೆದ ಮೂರು ತಿಂಗಳ ಹಿಂದೆ ರವಿಕೃಷ್ಣಾ ರೆಡ್ಡಿ ಎಂಬುವವರು ಜಾರಿ ನಿರ್ದೇಶನಾಲಯಕ್ಕೆ ಕೆ. ಜೆ. ಜಾರ್ಜ್ ವಿರುದ್ದ ದೂರು ನೀಡಿದ್ದರು. ವಿದೇಶದಲ್ಲಿ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಿದ್ದಾರೆ. ಎಲೆಕ್ಷನ್ ಅಫಿಡೆವಿಟ್ ನಲ್ಲಿ ಮಾಹಿತಿ ನೀಡಿರಲಿಲ್ಲ ಎಂಬ ಆರೋಪದ ಮೇಲೆ ದೂರು ನೀಡಲಾಗಿತ್ತು.  ಈ ದೂರಿನ ಅನ್ವಯ ಇಡಿ ಪ್ರಕರಣ ದಾಖಲು ಮಾಡಿಕೊಂಡಿತ್ತು. ಇದೀಗ ಇಡಿ ಸಮನ್ಸ್ ಜಾರಿಗೊಳಿಸಿದೆ.

Key words: ED -summons -former minister- KJ George – his family.