Sunday, September 13, 2026

BDA Apartments

ಮಾರ್ಚ್ 5 ರಂದು ಬಜೆಟ್ ಮಂಡನೆ: ಅಮಿತ್ ಶಾ ಜತೆ ಚರ್ಚೆ ಬಳಿಕ ಸಂಪುಟ ವಿಸ್ತರಣೆ- ಸಿ...
Home Front Page ಮಾರ್ಚ್ 5 ರಂದು ಬಜೆಟ್ ಮಂಡನೆ: ಅಮಿತ್ ಶಾ ಜತೆ ಚರ್ಚೆ ಬಳಿಕ ಸಂಪುಟ ವಿಸ್ತರಣೆ-...

ಮಾರ್ಚ್ 5 ರಂದು ಬಜೆಟ್ ಮಂಡನೆ: ಅಮಿತ್ ಶಾ ಜತೆ ಚರ್ಚೆ ಬಳಿಕ ಸಂಪುಟ ವಿಸ್ತರಣೆ- ಸಿಎಂ ಬಿಎಸ್ ವೈ ಹೇಳಿಕೆ….

ಶಿವಮೊಗ್ಗ,ಜ,15,2020(www.justkannada.in): ಮಾರ್ಚ್ 5 ರಂದು ರಾಜ್ಯ ಬಜೆಟ್ ಮಂಡನೆ ಮಾಡಲಾಗುವುದು ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ನಿವಾಸದಲ್ಲಿ ಮಾತನಾಡಿದ  ಸಿಎಂ ಬಿಎಸ್ ಯಡಿಯೂರಪ್ಪ, ಮಕರ ಸಂಕ್ರಾತಿ ಹಬ್ಬದ ಶುಭಾಶಯಗಳು  ನಾಡಿನ ಜನತೆಗೆ ಸುಖ, ಸಮೃದ್ಧಿ ತರಲಿ ಎಂದು ಶುಭ ಹಾರೈಸಿದರು.

ಮಾ. 5 ರಂದು ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಿದ್ದು, ಬಜೆಟ್ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ರೈತ ಪರವಾದ ಬಜೆಟ್ ಮಂಡಿಸಲಿದ್ದೇವೆ ಎಂದರು.  ಹಾಗೆಯೇ ಜ.18 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹುಬ್ಬಳ್ಳೀಗೆ ಬರಲಿದ್ದು, ಅಂದು ಅವರೊಂದಿಗೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.  ಅಮಿತ್ ಶಾ ಜತೆ ಚರ್ಚಿಸಿದ ಬಳಿಕ ಸಂಫುಟ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.

Key words: Budget – March 5-cabinet expansion – discussion – Amit Shah-CM BS yeddyurappa