ಸಂಚಾರಿ ಕೋವಿಡ್ ಲ್ಯಾಬ್ ವಾಹನಕ್ಕೆ ಚಾಲನೆ 

ಮೈಸೂರು,ಅಕ್ಟೋಬರ್,29,2020(www.justkannada.in) : ಮೈಸೂರಿನಲ್ಲಿ ಸಂಚಾರಿ ಕೋವಿಡ್ ಲ್ಯಾಬ್ ವಾಹನಕ್ಕೆ ಗುರುವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಚಾಲನೆ ನೀಡಿದರು.jk-logo-justkannada-logo

ಆಟೋಮೋಟಿವ್ ಎಕ್ಸೆಲ್ ಕಂಪನಿಯಿಂದ ಜಿಲ್ಲಾಡಳಿತಕ್ಕೆ ‘ಲ್ಯಾಬ್ ಆನ್ ವೀಲ್’  ಸಂಚಾರಿ ಪ್ರಯೋಗಾಲಯ ವಾಹನ ಹಸ್ತಾಂತರ ಮಾಡಲಾಯಿತು.

ಸುಮಾರು 72 ರಿಂದ 80 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸಂಚಾರಿ ಲ್ಯಾಬ್. ಇನ್ನು ಎರಡು, ಮೂರು  ವಾರಗಳಲ್ಲಿ ಜನರ ಸೇವೆಗೆ ಅತ್ಯಾಧುನಿಕ ಸೌಲಭ್ಯಗಳುಳ್ಳ ಲ್ಯಾಬ್ ವಾಹನ ಸಂಚರಿಸಲಿದೆ. ನಗರದೆಲ್ಲೆಡೆ‌ ಸಂಚರಿಸಿ ಅವಶ್ಯಕತೆ ಇರುವೆಡೆ ಕೋವಿಡ್ ಟೆಸ್ಟ್ ಮಾಡಲಿದ್ದು, ಜನದಟ್ಟಣೆ ಇರುವಂತಹ ಕಡೆಗಳಲ್ಲಿ ವೇಗವಾಗಿ ಕೋವಿಡ್ ಟೆಸ್ಟ್ ಮಾಡಲು ಸಹಕಾರಿಯಾಗಿದೆ.

ಗ್ರಾಮೀಣ ಭಾಗಕ್ಕೂ ಸಂಚಾರಿ ಲ್ಯಾಬ್  ವ್ಯವಸ್ಥೆಗೆ‌ ಚಿಂತನೆ. ಈಗಾಗಲೇ ಬೆಂಗಳೂರಿನಲ್ಲಿ ಸಂಚಾರಿ ಲ್ಯಾಬ್ ಗೆ ಸಿಎಂ ಚಾಲನೆ ನೀಡಿದ್ದು, ಕೊರೊನ ನಿಯಂತ್ರಣಕ್ಕೆ ಮತ್ತಷ್ಟು ಸಹಕಾರಿಯಾಗಲಿದೆ.

key words : Drive-congested-Cavid-Lab-vehicle