ಸಿಸಿಬಿ ವಿಚಾರಣೆಗೆ ಇನ್ನೂ ಹಾಜರಾಗದ ನಿರೂಪಕಿ ಅನುಶ್ರೀ : ಕೋರ್ಟ್ ಗೆ ಇಬ್ಬರು ಆರೋಪಿಗಳು ಹಾಜರು…

ಮಂಗಳೂರು,ಸೆಪ್ಟಂಬರ್,25,2020(www.justkannada.in): ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ ಅನುಶ್ರೀ ಸಿಸಿಬಿ ವಿಚಾರಣೆಗೆ ಇನ್ನೂ ಹಾಜರಾಗದ ಹಿನ್ನಲೆ ಆರೋಪಿಗಳನ್ನು ಸಿಸಿಬಿ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದಾರೆ.jk-logo-justkannada-logo

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಿರೂಪಕಿ ಅನುಶ್ರೀ ಅವರಿಗೆ ನಿನ್ನೆ ಸಿಸಿಬಿ ನೋಟಿಸ್ ಜಾರಿ ಮಾಡಿತ್ತು. ಆದರೆ ನಿರೂಪಕಿ ಅನುಶ್ರೀ ಸಿಸಿಬಿ ವಿಚಾರಣೆಗೆ ಇನ್ನೂ ಹಾಜರಾಗಿಲ್ಲ. ಅನುಶ್ರೀ ಅವರನ್ನ ಸಿಸಿಬಿ ವಿಚಾರಣೆ ನಡೆಬೇಕಾಗಿದ್ದು ಈ ಹಿನ್ನೆಲೆ, ಆರೋಪಿಗಳಾದ ಕಿಶೋರ್ ಶೆಟ್ಟಿ, ಅಕೀಲ್ ನೌಶೀಲ್ ಇಬ್ಬರನ್ನು ಮಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪಾಂಡೇಶ್ವರದ ನಾರ್ಕೊಟಿಕ್ ಠಾಣೆಯಿಂದ  ಆರೋಪಿಗಳನ್ನು ಶಿಫ್ಟ್ ಮಾಡಲಾಗಿದ್ದು, ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಬಳಿಕ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಗಿದೆ.anushree-ccb-hearing-two-accused-mangalore-court

ಕಿಶೋರ್ ಶೆಟ್ಟಿ ಆಪ್ತ ತರುಣ್ ನೀಡಿದ ಮಾಹಿತಿ ಮೇರೆಗೆ ನಿರೂಪಕಿ ಅನುಶ್ರೀ ಅವರಿಗೆ  ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು.

Key words: Anushree – CCB –hearing-Two accused -mangalore court.