Thursday, August 6, 2026

BDA Apartments

Home Cinema ಆರ್.ಆರ್ ನಗರದಲ್ಲಿ ಇಂದು ನಟ ದರ್ಶನ್ ಪ್ರಚಾರ: ಬಿಗಿ ಪೊಲೀಸ್ ಭದ್ರತೆ…

ಆರ್.ಆರ್ ನಗರದಲ್ಲಿ ಇಂದು ನಟ ದರ್ಶನ್ ಪ್ರಚಾರ: ಬಿಗಿ ಪೊಲೀಸ್ ಭದ್ರತೆ…

ಬೆಂಗಳೂರು,ಅಕ್ಟೋಬರ್,30,2020(www.justkannada.in): ನವೆಂಬರ್ 3 ರಂದು ನಡೆಯಲಿರುವ  ಆರ್.ಆರ್ ನಗರ ಉಪಚುನಾವಣಾ ಕಣ ರಂಗೇರಿದ್ದು ಇಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ನಡೆಸಲಿದ್ದಾರೆ.jk-logo-justkannada-logo

ಯಶವಂತಪುರ ರೈಲ್ವೆಸ್ಟೇಷನ್ ನಿಂದ ರೋಡ್ ಶೋ ನಡೆಸಲಿರುವ ದರ್ಶನ್, ಮಲ್ಲತ್ತಹಳ್ಳಿ, ಪಾಪರೆಡ್ಡಿ ಪಾಳ್ಯ, ಸೇರಿ ಹಲವೆಡೆ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ.

ಆರ್.ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್ ರೋಡ್ ಶೋ ನಡೆಸಿ ಮತಯಾಚನೆ ಮಾಡಲಿದ್ದಾರೆ. ನಟ ದರ್ಶನ್ ಪ್ರಚಾರ ಹಿನ್ನೆಲೆ ಅಹಿತಕರ ಘಟನೆ ನಡೆಯದಂತೆ ಕಟ್ಟಚ್ಚರ ವಹಿಸಲಾಗಿದೆ. ಭದ್ರತೆಗಾಗಿ ಓರ್ವ ಡಿಸಿಪಿ, ಮೂವರು ಎಸಿಪಿ, ಐವರು ಇನ್ಸ್ ಪೆಕ್ಟರ್ಸ್, 15 ಜನ ಪಿಎಸ್ ಐ, 50 ಮಂದಿ ಪೊಲೀಸರು, 3 ಕೆಎಸ್ ಆರ್ ಪಿ ತುಕಡಿ, 1 ಡಿಎಆರ್ ತುಕಡಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

Key words: Actor- Darshan -campaign – RR nagar- bjp- candidate-muniratna- Tight -police security …