ವೋಟ್ ಬ್ಯಾಂಕ್ ರಾಜಕಾರಣ ಬೇಡ: ಹೆಣ್ಣುಮಕ್ಕಳು ಹಿಜಾಬ್ ಹಾಕಿದ್ರೆ ತಪ್ಪೇನು..? ಮಾಜಿ ಸಿಎಂ ಹೆಚ್.ಡಿಕೆ

ಬೆಂಗಳೂರು,ಮಾರ್ಚ್,17,2022(www.justkannada.in):  ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ  ನಿರಾಕರಿಸಿ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಇಂದು ಮುಸ್ಲೀಂ ಸಂಘಟನೆಗಳು ಬಂದ್ ಆಚರಿಸುತ್ತಿದ್ದು, ಈ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಹಾಕಿದರೇ ತಪ್ಪೇನು..? ದುಪ್ಪಟವನ್ನು ಯಾವ ರೀತಿ ಬೇಕಾದ್ರೂ ಹಾಕಬಹುದು. ಮಕ್ಕಳ ನಡುವೆ ದ್ವೇಷ ಬೇಡ. ಹಿಂದೂ ಮುಸ್ಲೀಂ ಮಕ್ಕಳು ಇದ್ದಾರೆ ಬಿಸಿಲಿಗೆ ಬಟ್ಟೆ ಸುತ್ತಿಕೊಂಡಿರುತ್ತಾರೆ.  ಈ ವಿಚಾರದಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಬೇಡ ಎಂದಿದ್ದಾರೆ.

ಶಿಕ್ಷಣದಿಂದ ಅವರಲ್ಲಿ ಬದಲಾವಣೆ ಆಗಬಹುದು ಹಿಂದೆ ಗಂಡ ತೀರಿಕೊಂಡರೇ ತಲೆ ಬೋಳಿಸುವ ಪದ್ದತಿ ಇತ್ತು.  ಈಗ ಅಂತಹ  ಸಂಪ್ರದಾಯ ಇಲ್ಲ.  ಶೀಕ್ಷಣದಿಂದ ಎಲ್ಲಾ ಬದಲಾವಣೆಯಾಗುತ್ತಿದೆ. ಆದರೆ ರಾಜಕೀಯದಲ್ಲಿ ಇದನ್ನು ಜೀವಂತವಾಗಿಡಲು ಯತ್ನಿಸಲಾಗುತ್ತಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದರು.

Key words: hijab-Former CM -HD Kumaraswamy