ಪಡಿತರ ಚೀಟಿದಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್.

ನವದೆಹಲಿ,ಮಾರ್ಚ್,17,2022(www.justkannada.in):   ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ಧಿ ನೀಡಿದ್ದು ಪಡಿತರ ಪಡೆಯಲು ಈಗ ಬೆರಳಚ್ಚು(ಬಯೋಮೆಟ್ರಿಕ್) ಅವಶ್ಯಕತೆ ಇಲ್ಲ. ಆಧಾರ್ ಕಾರ್ಡ್ ಇದ್ಧರೆ ಸಾಕು ಎಂದು ತಿಳಿಸಿದೆ.

ಈ ಕುರಿತು ಇಂದು ಲೋಕಸಭೆಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ಪಡಿತರ ಪಡೆಯಲು ಆಧಾರ್ ಕಾರ್ಡ್ ಇದ್ದರೇ ಸಾಕು.  ಪಡಿತರ ಪಡೆಯಬಹುದು. ಹಾಗೆಯೇ ಸ್ಥಳ ಬದಲಾಯಿಸಿದರೇ ಹೊಸ ರೇಷನ್ ಕಾರ್ಡ್ ಮಾಡಿಸುವ ಅಗತ್ಯವಿಲ್ಲ.  ಆಧಾರ್ ಕಾರ್ಡ್ ತೋರಿಸಿ ಪಡಿತರ ಪಡೆಯಬಹುದು ಎಂದು ತಿಳಿಸಿದೆ.

ಪಡಿತರ ಪಡೆಯಲು ಈಗ ಬೆರಳಚ್ಚುನಿಂದಾಗಿ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಕೆಲವರಿಗೆ ಬೆರಳಚ್ಚು ಬಾರದೇ ಸಾಕಷ್ಟು ತೊಂದರೆಯಾಗುತ್ತಿತ್ತು. ಜನರು  ಪಡಿತರ ಪಡೆದು ಬರುವ ವೇಳೆಗೆ ಹೈರಣಾಗುವ ಸ್ಥಿತಿಯೂ ನಿರ್ಮಾಣವಾಗುತ್ತಿತ್ತು.

Key words: Good news – ration cards-centre