ಮಾ.19 ರಂದು ಮೈಸೂರಿನಲ್ಲಿ ‘ಕಾಮ್ರೇಡ್ ಬ್ಯಾಬಲ್’ ಇಂಗ್ಲೀಷ್ ನಾಟಕ ಪ್ರದರ್ಶನ.

ಮೈಸೂರು,ಮಾರ್ಚ್,17,2022(www.justkannada.in): ರಾಜಕೀಯ ವಿಡಂಬನೆಯನ್ನು ಒಳಗೊಂಡ ಒಂದು ಅಪೂರ್ಣ ಉದ್ಯಮದ ಕಥೆಯಾದ ಕಾಮ್ರೇಡ್ ಬ್ಯಾಬಲ್ ಎಂಬ ಇಂಗ್ಲೀಷ್ ನಾಟಕ ಪ್ರದರ್ಶನವನ್ನ ಮಾರ್ಚ್ 19 ರಂದು ಮೈಸೂರಿನ ರಮಾ ಗೋವಿಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಮಾರ್ಚ್ 19ರ ಶನಿವಾರ ಸಂಜೆ 7 ಗಂಟೆಗೆ ಈ ನಾಟಕ ಪ್ರದರ್ಶನವಾಗಲಿದೆ. ಅಲನ್ ಕೋಲ್ಸ್ಕಿ ಹೋರ್ವಿಟ್ಜ್ ಪಠ್ಯದಲ್ಲಿ ಆರಿಸಲಾಗಿದ್ದು, ಪತ್ರಕರ್ತೆ ಪ್ರೀತಿ ನಾಗರಾಜ್ ನಿರ್ದೇಶಿಸಿದ್ದಾರೆ.

ಕಲಾ ಸುರುಚಿ

ಕಲಾಸುರುಚಿ 1984 ರಲ್ಲಿ ರಂಗಸಂಬಂಧಿ ಚಟುವಟಿಕೆಗಳನ್ನು ನಡೆಸುವ ಸಂಸ್ಠೆಯಾಗಿ ಸ್ಥಾಪಿತವಾಯಿತು. ಕಲಾಸುರುಚಿ ಎರಡೂವರೆ ದಶಕಗಳಿಗೂ ಹೆಚ್ಚುಕಾಲದಿಂದ, ರಂಗಭೂಮಿಯ ಮತ್ತು ಇತರ ಆಯಾಮಗಳ ಬಗೆಗಿನ ಕಾರ್ಯಕ್ರಮಗಳನ್ನುರೂಪಿಸಿಕೊಂಡು, ಯಶಸ್ವಿಯಾಗಿ ನಡೆಸಿಕೊಂಡುಬಂದಿದೆ.  ನಾಟಕ ತಾಲೀಮು ಮತ್ತು ಪ್ರದರ್ಶನಗಳಷ್ಟೇ ಅಲ್ಲದೆ ರಂಗಗೀತೆಗಳು, ರಂಗಸಜ್ಜಿಕೆ, ಪ್ರಸಾಧನ, ಗೀತನಾಟಕ, ಓದುನಾಟಕ, ನಾಟಕ ಮಾಹಿತಿ ಮತ್ತು ಅದರ ಛಾಯಾಚಿತ್ರ ಪ್ರದರ್ಶನಗಳಂತಹ ರಂಗಭೂಮಿಯ ವೈವಿಧ್ಯಮಯ ಬದಿಗಳನ್ನು ತನ್ನದೇ ಬಗೆಯಲ್ಲಿ ಸೃಷ್ಟಿಸಿ, ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.  ಕಥೆ ಕೇಳೋಣಬನ್ನಿ, ಸಾಹಿತ್ಯ ಚಾವಡಿ ಮತ್ತು ನಾಟಕವಾಚನ ಮುಂತಾದ ನಿಯಮಿತ ಕಾರ್ಯಕ್ರಮಗಳೊಂದಿಗೆ ವರ್ಷಪೂರ್ತಿ ನಾಟಕ ಪ್ರದರ್ಶನಗಳನ್ನೂ ನೀಡಿ ಮೈಸೂರಿನ ಸಕ್ರಿಯ ತಂಡವಾಗಿದೆ.  ಇದಲ್ಲದೆ ಹೈಸ್ಕೂಲ್ ಮಕ್ಕಳಿಗಾಗಿ ಪ್ರತಿವರ್ಷ ವಿಶ್ವನಾಥ ಮಿರ್ಲೆ ನೆನಪಿನ ಇಂಗ್ಲಿಷ್ ನಾಟಕೋತ್ಸವವನ್ನೂ ನಡೆಸುತ್ತಿದೆ.  ಕನ್ನಡ ನಾಟಕಗಳಲ್ಲದೆ ನಿಯಮಿತವಾಗಿ ಇಂಗ್ಲಿಷ್ ನಾಟಕಗಳನ್ನೂ ಪ್ರದರ್ಶಿಸುತ್ತಿರುವ ತಂಡ ಇದುವರೆಗೆ ರವೀಂದ್ರನಾಥ್ ಟ್ಯಾಗೋರರ ’ಚಾಂಡಾಲಿಕಾ’, ಫರ್ಹಾದ್ ಸೊರಾಬ್ಜಿ ಅವರ ’ ಹಾರ್ಡ್ ಪ್ಲೇಸಸ್’, ದಿಲೀಪ್ ಝವೇರಿ ಅವರ ’ಬ್ರೆತ್ ಆಫ್ ವ್ಯಾಸ್’ ಮತ್ತು ಅನುಪಮಾ ಚಂದ್ರಶೇಖರ್ ಅವರ ’ಫ್ರೀ ಔಟ್ ಗೋಯಿಂಗ್’ ನಾಟಕಗಳನ್ನು ಪ್ರದರ್ಶಿಸಿದೆ.

ಕಾಮ್ರೇಡ್ ಬ್ಯಾಬಲ್ ರಾಜಕೀಯ ವಿಡಂಬನೆಯನ್ನು ಒಳಗೊಂಡ ಒಂದು ಅಪೂರ್ಣ ಉದ್ಯಮದ ಕಥೆ.

ಎಲ್ಲಾ ದೇಶಗಳಲ್ಲಿ ಎಲ್ಲಾ ಕಾಲಗಳಲ್ಲೂ ಆಗಿದ್ದಿರಬಹುದಾದ ವ್ಯಕ್ತಿಯೊಬ್ಬನ ಕಥೆ ಇದು. ಕಾಮ್ರೇಡ್ ಬ್ಯಾಬಲ್, ಒಂದು ರಾಜಕೀಯ ನೆಲೆಯುಳ್ಳ ಅಣಕವಾಗಿದ್ದು ಮೆಫಿಸ್ಟೋಫೆಲ್ಸ್ ಮೆದಿಚಿಬ್ಯಾಬಲ್‌ ನ ಮೃತ ದೇಹವು ಅವನು ಗೋರಿಯಿಂದ ಉದ್ಭವಿಸಿ ಬರುವ ಮೂಲಕ ರಂಭವಾಗುತ್ತದೆ. ಸಾವಿನ ನಂತರ ಬೇರೆ ಸ್ವರೂಪದಲ್ಲಿ ಕಾಣುತ್ತಿರುವ ಬ್ಯಾಬಲ್, ತನ್ನನ್ನು ತಾನು ಹೊಸ ರೀತಿಯ ವ್ಯಕ್ತಿಯಾಗಿ ಪರಿಭಾವಿಸುವ ಹಾಗೂ ಹಾಗೆಂದು ಜನರನ್ನು ನಂಬಿಸಲು ಪ್ರಯತ್ನ ಪಡುತ್ತಿದ್ದಾನೆ. ತನ್ನ ಅಪೂರ್ಣ ವ್ಯವಹಾರವನ್ನು ಒಮ್ಮೊಮ್ಮೆ ಧೀರನಂತೆ, ಮತ್ತೊಮ್ಮೆ ದೀನನಂತೆ ವಿವರಿಸುವಾಗ, ಸಾರ್ವಜನಿಕ ಉತ್ತರದಾಯಿತ್ವಕ್ಕೆ-ನ್ಯಾಯದ ಮಾತುಗಳಿಗೆ ಮುಖಾಮುಖಿಯಾಗುವಾಗ ತನ್ನ ’ರಾಜಕೀಯ (ಆಯ್ಕೆ), ಆಪ್ತ ವಲಯದ’ ಬಗ್ಗೆ ಪ್ರಶ್ನೆಗಳನ್ನು ಅವನ ಬಗ್ಗೆ ಕೆಲವು ವಾಸ್ತವವನ್ನು ಎದುರಿಗೆ ಇಡುವವರು ಕೆಲವರು ಮಾತ್ರ. ಅವರಿಗೆ ಅವನಿಂದ ವ್ಯಾವಹಾರಿಕ ಲಾಭವಾಗಿದೆ. ಅವನ ಜೀವವನ್ನು ಸೆಳೆದ ಬಂದೂಕಿನ್ನು ಚಲಾಯಿಸಿದ ವ್ಯಕ್ತಿ ತೋರುವ ಬ್ಯಾಬಲ್ ಯಾವ ಸಾಹಸಿಯೂ ಅಲ್ಲ. ಇದು ನೀವು ಕಾಣಬೇಕಾದ ಆಯಾಮ.

ಈ ನಾಟಕವು ಅದರ ಅಸಾಂಪ್ರದಾಯಿಕ ಕಥಾ ಹಂದರವನ್ನು ಹೊಂದಿದ್ದ ಕಾರಣಕ್ಕೆ, ವಾಸ್ತವದ ಮೇಲೆ ನಿಂತಿದೆ ಎನ್ನುವ ನೆಲೆಯ ಮೇಲೆ ಪ್ರದರ್ಶನಕ್ಕಾಗಿ ಆಯ್ಕೆ ಮಾಡಲ್ಪಟ್ಟಿದೆ.ಒಬ್ಬ ವ್ಯಕ್ತಿಯ ’ಭವ್ಯ ಆಲೋಚನೆಗಳು’ ಅವನ ‘ವೈಯಕ್ತಿಕ ತೆವಲುಗಳು’ ಎಂಬ ತೆಳುವಾದ ಗೆರೆಯನ್ನು ದಾಟುವ ಕುರಿತು ಹರಿತವಾದ ಚರ್ಚೆ ರಾಷ್ಟ್ರಗಳಾದ್ಯಂತ ಕಾರ್ಪೊರೇಟ್ ಮತ್ತು ರಾಜಕೀಯ ಸ್ಥಳಗಳಲ್ಲಿ ಪರಿಚಿತ ಪದವಾಗಿರುವ ‘ಬಾಬಲ್ ಪರಿಕಲ್ಪನೆ’ಯ ಮೇಲಿನ ಹಣಕಾಸಿನ ಅಕ್ರಮಗಳು ಮತ್ತು ಸಾರ್ವಜನಿಕ ಹೊಣೆಗಾರಿಕೆಯ ಮೇಲಿನ ಪ್ರಶ್ನೆಗಳನ್ನು ಸಾಮಾನ್ಯವಾಗಿ ಆತುರಾತುರವಾಗಿ ಹೂತುಬಿಡಲಾಗುತ್ತದೆ. ಅಂತಹ ಕನಸುಗಳನ್ನು ಬಿತ್ತಿದ ವ್ಯಕ್ತಿಗಳು ಬಹುತೇಕ ಹುತಾತ್ಮರು ಎನ್ನಿಸಿಕೊಂಡು ಬಿಡುತ್ತಾರೆ.ಭವಿಷ್ಯದ ಪೀಳಿಗೆಗೆ ಇತಿಹಾಸದಲ್ಲಿ ದಾಖಲಿಸಬಹುದಾದ ಯಾವುದೇ ಪಾಠಗಳನ್ನು ಉಳಿಸುವುದಿದೇ ಇಲ್ಲ. ಹಾಗಾಗಿ ತಪ್ಪುಗಳು ಮತ್ತೆ ಮತ್ತೆ ಹೊಸ ಸ್ವರೂಪದಲ್ಲಿ ಘಟಿಸುತ್ತಲೇ ಇರುತ್ತವೆ ಎಂದು ನಾಟಕದ ಬಗ್ಗೆ  ನಿರ್ದೇಶಕಿ ಪ್ರೀತಿ ನಾಗರಾಜ್ ವಿವರಿಸಿದ್ದಾರೆ.

ರಾಜಕೀಯ ಪತ್ರಕರ್ತೆ ಮತ್ತು ಲೇಖಕಿ ಪ್ರೀತಿನಾಗರಾಜ್ ಅವರು ತಮ್ಮ ಬಾಲ್ಯದ ದಿನಗಳಿಂದಲೂ ರಂಗಭೂಮಿಯೊಂದಿಗೆ ನಂಟು ಹೊಂದಿದ್ದಾರೆ.

ಮುಖ್ಯವಾಹಿನಿಯ ಮಾಧ್ಯಮ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಅವರದ್ದು ಎರಡುದಶಕಗಳ ಅನುಭವ. ಅವರು ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್‌ನಲ್ಲಿ ಅಂಕಣಕಾರರಾಗಿದ್ದಾರೆ.

Key words: Comrade Babel-English Drama -Show