ಕೊರೋನಾ ಲಸಿಕೆ 2ನೇ ಡೋಸ್ ಮುಗಿಯುವವರೆಗೂ ಮೊದಲ ಡೋಸ್ ಕೊಡಬೇಡಿ- ಡಿಸಿಗಳಿಗೆ ಸಿಎಂ ಬಿಎಸ್ ವೈ ತಾಕೀತು…

ಬೆಂಗಳೂರು,ಮೇ,17,2021(www.justkannada.in): ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯನ್ನ ಮೊದಲ ಡೋಸ್ ನೀಡಬೇಡಿ. 2ನೇ ಡೋಸ್ ನೀಡಲು ಆದ್ಯತೆ ಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟ ಆದೇಶ ನೀಡಿದ್ದಾರೆ.jk

ಕೋವಿಡ್ ನಿರ್ವಹಣೆ ಸಂಬಂಧ ರಾಜ್ಯದ ಜಿಲ್ಲಾಧಿಕಾರಿಗಳ ಜತೆ ಸಿಎಂ ಬಿಎಸ್ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಚರ್ಚಿಸಿದರು. ಸಭೆಯಲ್ಲಿ ಮಾತನಾಡಿರುವ ಸಿಎಂ ಬಿಎಸ್ ವೈ, ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ಮೊದಲ ಡೋಸ್ ಕೊಡಬೇಡಿ, ಎರಡನೇ ಡೋಸ್ ಲಸಿಕೆ ಪಡೆಯುವವರಿಗೆ ಆದ್ಯತೆ ನೀಡಿ. 2ನೇ ಡೋಸ್ ಮುಗಿಯುವವರೆಗೂ ಮೊದಲ ಡೋಸ್ ನೀಡಬೇಡಿ ಎಂದು ತಾಕೀತು ಮಾಡಿದರು.do-not-give-first-dose-corona-vaccine-cm-bs-yeddyurappa-dcs

ಈಗಾಗಲೇ ಕೇಂದ್ರದಿಂದ ಬಂದಿರುವ ವ್ಯಾಕ್ಸಿನ್ ಹಂಚಿಕೆ ಮಾಡಲಾಗಿದೆ. ಹೆಚ್ಚುವರಿ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರದಿಂದ ಹೆಚ್ಚುವರಿ ಲಸಿಕೆ ಬಂದ ತಕ್ಷಣ ವ್ಯಾಕ್ಸಿನ್ ಹಂಚಿಕೆ ಮಾಡೋಣ. ಸದ್ಯಕ್ಕೆ ಎರಡನೇ ಡೋಸ್ ಕೊಡಲು ಆದ್ಯತೆ ನೀಡಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

Key words: Do not -give – first dose – corona vaccine -CM BS Yeddyurappa -DCs.