Thursday, August 20, 2026

BDA Apartments

Home Front Page ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂದು ‘ಕೈ’ ಕಾರ್ಯಕರ್ತರಿಂದ ಘೋಷಣೆ.

ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಂದು ‘ಕೈ’ ಕಾರ್ಯಕರ್ತರಿಂದ ಘೋಷಣೆ.

ದಾವಣಗೆರೆ,ಜುಲೈ,2,2021(www.justkannada.in): ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದು,  ಹಲವು ಕಾಂಗ್ರೆಸ್ ನಾಯಕರು ಸಹ  ಸಿಎಂ ರೇಸ್ ನಲ್ಲಿರುವುದಾಗಿ ಬಹಿರಂಗವಾಗಿ ಹಾಗೂ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ಇತ್ತೀಚೆಗೆ ಕೆಲ ಶಾಸಕರು ಸಿದ್ಧರಾಮಯ್ಯ ಮುಂದಿ ಸಿಎಂ ಎಂಬ ಹೇಳಿಕೆ ನೀಡಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಕಾರ್ಯಕರ್ತರು  ಅದೇ ಘೋಷಣೆ ಮಾಡಿದ್ದಾರೆ.jk

ಹೌದು,  ದಾವಣಗೆರೆಯ ಹರಿಹರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಸಿಎಂ ಸಿದ್ಧರಾಮಯ್ಯ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ. ಹರಿಹರದಲ್ಲಿ ಕಾಂಗ್ರೆಸ್ ಶಾಸಕ ರಾಮಪ್ಪ ಪುತ್ರಿಯ ವಿವಾಹ ಕಾರ್ಯಕ್ರಮ ನಡೆಯುತ್ತಿತ್ತು. ಮದುವೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಭಾಗಿಯಾಗಿದ್ದರು. ಈ ವೇಳೆ ಕಲ್ಯಾಣ ಮಂಟಪದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಈ ಘೋಷಣೆ ಕೂಗಿದ್ದಾರೆ.

ವಿವಾಹ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘನೆ.

ಇನ್ನು ಶಾಸಕ ರಾಮಪ್ಪ ಮಗಳ ಮದುವೆ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.  ಮದುವೆಯಲ್ಲಿ 40 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ 40ಕ್ಕೂ ಹೆಚ್ಚು ನೂರಾರು ಜನರು ಮದುವೆಯಲ್ಲಿ ಸೇರಿದ್ದರು. ಕಾರ್ಯಕರ್ತರು ನಾಯಕರು ದೈಹಿಕ ಅಂತರ ಮರೆತು ಸೇರಿದ್ದರು. ಈ ಮೂಲಕ ಜನಪ್ರತಿನಿಧಿಗಳು ಕೋವಿಡ್ ನಿಯಮ ಗಾಳಿಗೆ ತೋರಿದ್ದಾರೆ ಎನ್ನಲಾಗಿದೆ.

Key words: Congress- workers – next- Chief Minister- Siddaramaiah-davanagere