ರಾಜ್ಯದಲ್ಲಿ ನಿಜವಾದ ಸಿಎಂ ಬಿಎಸ್ ವೈ ಅಲ್ಲ ವಿಜಯೇಂದ್ರ: ಇದು 20 to 25 ಪರ್ಸೆಂಟ್ ಸರ್ಕಾರ- ಸಿದ್ಧರಾಮಯ್ಯ ಟೀಕೆ.

ದಾವಣಗೆರೆ,ಜುಲೈ,2,2021(www.justkannada.in): ವಾಸ್ತವದಲ್ಲಿ ಬಿಎಸ್ ವೈ ಸಿಎಂ ಅಲ್ಲ. ನಿಜವಾದ ಸಿಎಂ ವಿಜಯೇಂದ್ರ ಆಗಿದ್ದಾರೆ.  ಇದು 20 to 25 ಪರ್ಸೆಂಟ್ ಸರ್ಕಾರ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದರು.jk

ದಾವಣಗೆರೆಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ  ಪ್ರತಿಯೊಂದು ಕೆಲಸಕ್ಕೆ ವಿಜಯೇಂದ್ರ ಶೇ.20 ರಷ್ಟು ಹಣ ಪಡೆಯುತ್ತಾರೆ. ಬಿಎಸ್ ವೈ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ. ಚೆಕ್ ಮೂಲಕ ಲಂಚ ತೆಗೆದುಕೊಳ್ಳುವುದು ಬಿಜೆಪಿಗೆ ಹೊಸದೇನಲ್ಲ ಎಂದು ಲೇವಡಿ ಮಾಡಿದರು.

ಸಚಿವ ಶ್ರೀರಾಮುಲು ಪಿಎ ವಿರುದ್ಧ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ,  ಈ ಬಗ್ಗೆ  ಯಡಿಯೂರಪ್ಪ ಮಗ ದೂರು ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಲಿ. ಈ ಸರ್ಕಾರದಲ್ಲಿ ಲಂಚ ಇಲ್ಲದೆ ಏನು ಆಗುತ್ತಿಲ್ಲ ಎಂದು ಕಿಡಿಕಾರಿದರು.

ಲಂಚ ಪಡೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಲಂಚ ಯಾರೆ ಪಡೆದಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು  ಲಂಚ ಪಡೆಯುವವರಿಗೆ ಶ್ರೀರಾಮುಲು ಬೆಂಬಲ ಕೊಟ್ಟರೆ,  ಶ್ರೀರಾಮುಲುಗೆ ಗೊತ್ತಿದ್ದೂ  ಇದು ನಡೆದಿದೆ ಅಂತಾ ಅರ್ಥ ಅಲ್ವಾ. ಲಂಚ ತೆಗೆದುಕೊಂಡು ಕೆಲಸ ಮಾಡುತ್ತಾರೆ ಅಂದ್ರೆ ಹೇಗೆ ಎಂದು ಸಿದ್ಧರಾಮಯ್ಯ ಹರಿಹಾಯ್ದರು.

Key words: Vijayendra – real CM –BS yeddyurappa-  former CM-Siddaramaiah