ಮೂವರು ವಿದ್ಯಾರ್ಥಿನೀಯರ ಮೇಲೆ ಆ್ಯಸಿಡ್ ದಾಳಿ: ಆರೋಪಿ ಬಂಧನ.

ಮಂಗಳೂರು,ಮಾರ್ಚ್,4,2024(www.justkannada.in): ಮೂವರು ವಿದ್ಯಾರ್ಥಿನೀಯರ ಮೇಲೆ ಆ್ಯಸಿಡ್ ದಾಳಿ ನಡೆದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆ ಕಡಬದಲ್ಲಿ ಮೂವರು ವಿದ್ಯಾರ್ಥಿನೀಯರ ಮೇಲೆ ದುಷ್ಕರ್ಮಿಯೊಬ್ಬ  ಆ್ಯಸಿಡ್ ದಾಳಿ ನಡೆಸಿದ್ದಾನೆ. ದ್ವಿತೀಯ ಪಿಯು ವಿದ್ಯಾರ್ಥಿನಿಯರಾದ ಅಲೀನಾ ಸಿಬಿ, ಅರ್ಚನಾ, ಅಮೃತ ಮೇಲೆ ಆ್ಯಸಿಡ್ ದಾಳಿ ನಡೆದಿದೆ.

ಆ್ಯಸಿಡ್ ದಾಳಿ ನಡೆಸಿದ  ಕೇರಳ ಮೂಲದ ಅಬೀನ್ ನನ್ನು ಪೊಲೀಸರು ಬಂಧಿಸಿದ್ದಾರೆ.ಇನ್ನು ಘಟನೆಯಲ್ಲಿ ಗಾಯಾಗೊಂಡಿರುವ ವಿದ್ಯಾರ್ಥಿನಿಯರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಮೂವರಿಗೂ ಕೂಡ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಒಬ್ಬರ ಆರೋಗ್ಯ ಗಂಭಿರವಾಗಿದೆ ಎನ್ನಲಾಗಿದೆ.
Key words: Acid attack – three- female students-Accused- arrested