ಕೊರೊನಾ ವಿರುದ್ಧ ಗೆದ್ದ ಧ್ರುವ ಸರ್ಜಾ ದಂಪತಿ

Promotion

ಬೆಂಗಳೂರು, ಜುಲೈ 23, 2020 (www.justkannada.in): ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಕೋವಿಡ್ ಸೊಂಕಿನಿಂದ ಗುಣಮುಖರಾಗಿದ್ದಾರೆ.

ಜುಲೈ 15 ರಂದು ಧ್ರುವ ಮತ್ತು ಪತ್ನಿ ಪ್ರೇರಣಾ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ಧೃಢವಾಗಿತ್ತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಮನೆಯಲ್ಲಿ ಕ್ವಾರಂಟೈನ್ ಇದ್ದ ದಂಪತಿಗಳು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಈ ವಿಷಯವನ್ನು ಧ್ರುವ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಮಗೆ ಚಿಕಿತ್ಸೆ ನೀಡಿದ ವೈದ್ಯರು, ಗುಣಮುಖರಾಗಲು ಪ್ರಾರ್ಥಿಸಿದ ಅಭಿಮಾನಿಗಳಿಗೆ ಧ್ರುವ ಸರ್ಜಾ ಧನ್ಯವಾದ ಹೇಳಿದ್ದಾರೆ.