ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ಧೇಗೌಡರ ಆರೋಪಕ್ಕೆ ತಿರುಗೇಟು ನೀಡಿದ ‘ಕೈ’ ಮುಖಂಡ ಮರಿಗೌಡ.

ಮೈಸೂರು,ಮೇ,12,2023(www.justkannada.in):  ನನ್ನ ವಿರುದ್ದ ಸುಳ್ಳು ಅಪಪ್ರಚಾರಕ್ಕೆ ಮರಿಗೌಡರೇ ಕಾರಣ ಎಂದು ಆರೋಪಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡರಿಗೆ ಕಾಂಗ್ರೆಸ್ ಮುಖಂಡ ಮರಿಗೌಡ ತಿರುಗೇಟು ನೀಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮರಿಗೌಡ, ಮಾವಿನಹಳ್ಳಿ ಸಿದ್ದೆಗೌಡರ ಪರ ನಾವು ನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ನನ್ನ ಹಾಗೂ ನಮ್ಮ ಕಾರ್ಯಕರ್ತರ ಮೇಲೆ ಸಿದ್ದೇಗೌಡ ಆರೋಪ ಮಾಡಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಉರುಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಿದ್ದೇಗೌಡರಿಗೆ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯೇ ಗೊತ್ತಿಲ್ಲ. ನಾವು ಈಗಲೂ ಸಿದ್ದೆಗೌಡರು ಗೆಲ್ಲುತ್ತಾರೆ ಎಂಬ ಭರವಸೆ ಅಲ್ಲಿದ್ದೇವೆ. ನಮ್ಮ ನಾಯಕರಾದ ಸಿದ್ದರಾಮಯ್ಯ ಅವರ ಮಾತಿನಂತೆ ಒಗ್ಗಟ್ಟಿನಿಂದ ಸಿದ್ದೇಗೌಡ ಪರವಾಗಿ 40 ದಿನ ಕೆಲಸ ಮಾಡಿದ್ದೇವೆ. ಕೊನೆಯ 4 ದಿನ ಅಭ್ಯರ್ಥಿ ಕಾಣೆಯಾಗಿದ್ದಾರೆ ಎಂದು ಕಾರ್ಯಕರ್ತರು ಕಸಿವಿಸಿ ಗೊಂಡಿದ್ದರು. ಇವರು ಯಾಕೆ ಹೀಗೆ ಮಾಡಿದ್ರು ಗೊತ್ತಿಲ್ಲ, ಹಣದ ಕೊರತೆ ಇದ್ರೆ ಜನರ ಬಳಿ ಸತ್ಯ ಹೇಳಬೇಕಿತ್ತು. ಅದನ್ನು ಬಿಟ್ಟು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ದೂರುವುದು ತಪ್ಪು ಎಂದು ಮರಿಗೌಡ ಕಿಡಿಕಾರಿದರು.

Key words: chamundeshwari- constituency- Congress candidate -Mavinahalli Siddegowda -marigowda