Thursday, August 6, 2026

BDA Apartments

Home Front Page “ಕೆಲವರಿಗೆ ಅತೃಪ್ತಿ ಆಗಿರೋದು ಸಹಜ” : ನಮ್ಮದು ಬಾಂಬೆ ಟೀಂ ಅಲ್ಲ ಎಂದ ಸಚಿವ ಬಿ.ಸಿ.ಪಾಟೀಲ್

“ಕೆಲವರಿಗೆ ಅತೃಪ್ತಿ ಆಗಿರೋದು ಸಹಜ” : ನಮ್ಮದು ಬಾಂಬೆ ಟೀಂ ಅಲ್ಲ ಎಂದ ಸಚಿವ ಬಿ.ಸಿ.ಪಾಟೀಲ್

ಚಾಮರಾಜನಗರ,ಜನವರಿ,23,2021(www.justkannada.in) : ನಮ್ಮ ಐದು ಬೆರಳುಗಳೇ ಒಂದೇ ಸಮವಿಲ್ಲ. ಹಾಗೆಯೇ ಕೆಲವರಿಗೆ ಅತೃಪ್ತಿ ಆಗಿರೋದು ಸಹಜ. ಆದರೆ, ಮುಂದೆ ಅಸಮಾಧಾನ ಶಮನವಾಗಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.jkಸುದ್ದಿಗಾರರೊಂದಿಗೆ ಸಂಪುಟ ವಿಸ್ತರಣೆ ನಂತರದ ಅಸಮಾಧಾನ ಕುರಿತಂತೆ ಪ್ರತಿಕ್ರಿಯಿಸಿದ ಅವರು, ನಮ್ಮದು ಈಗ ಬಾಂಬೆ ಟೀಂ ಅಲ್ಲ. ಬಿ.ಎಸ್.ವೈ ಟೀಂ, ಬಿಜೆಪಿ ಟೀಂ. ನಮ್ಮಲ್ಲಿ ಯಾವುದೇ ರೀತಿಯ ಬಿರುಕು ಕೂಡ ಇಲ್ಲ ಎಂದಿದ್ದಾರೆ.normal-unhappy-Minister-B.C.Patil

ನಾನು ಸ್ವಇಚ್ಛೆಯಿಂದ ಕೃಷಿ ಖಾತೆ ಪಡೆದಿದ್ದೇನೆ. ನನಗೆ ಕೃಷಿ ಖಾತೆ ಇಷ್ಟ ಕೂಡ ಆಗಿದೆ. ರೈತರ ಬಾಳು ಹಸನು ಮಾಡುವಂತ ಕೆಲಸವನ್ನು ಮಾಡುತ್ತಿದ್ದೇನೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕು, ಉತ್ತಮ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

key words : normal-unhappy-Minister-B.C.Patil