ಆನೆ ದಾಳಿಯಿಂದ ಮಾವುತ ಸಾವು ಪ್ರಕರಣ: ಪತ್ನಿಗೆ ಕೆಲಸ ಮತ್ತು ಸೂಕ್ತ ಪರಿಹಾರಕ್ಕೆ ಕುಟುಂಬಸ್ಥರಿಂದ ಆಗ್ರಹ….

ಮೈಸೂರು,ಆ,8,2020(www.justkannada.in): ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಆನೆ ದಾಳಿಯಿಂದ ಸಾವನ್ನಪ್ಪಿದ ಮಾವುತ  ಹರೀಶ್ ಅವರ ಅಂತಿಮ ದರ್ಶನ ಪಡೆಯಲಾಯಿತು.Death - elephant –attack-mysore-zoo-Demands - work - relief

ಚಾಮರಾಜೇಂದ್ರ  ಮೃಗಾಲಯದ ಬಳಿ ಮಾವುತ ಹರೀಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೃಗಾಲಯ ಸಿಬ್ಬಂದಿ ಮೃತ ಹರೀಶ್ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ಮಾವುತ ಹರೀಶ್ ಮೃತದೇಹದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮೃತ ಹರೀಶ್ ಗೆ ಸೂಕ್ತ ಪರಿಹಾರ ನೀಡುವಂತೆ ಕುಟುಂಬಸ್ಥರು ಆಗ್ರಹಿಸಿ ಮೃಗಾಲಯದ ಮುಂದೆ ಕಣ್ಣಿರು ಹಾಕಿದರು. ಹರೀಶ್ ನನ್ನು ಕೇವಲ ಗುತ್ತಿಗೆ ಆಧಾರಿತ ನೌಕರ ಎಂದು ಪರಿಗಣಿಸಲಾಗಿದೆ. ಅನುಕಂಪದ ಆಧಾರದ ಮೇಲೆ ಕೆಲಸ ನೀಡಲಾಗಿತ್ತು. ಮೃಗಾಲಯದ ವತಿಯಿಂದ ಅವರಿಗೆ ಖಾಯಂ ನೌಕರ ಎಂದು ಪರಿಗಣಿಸಿರಲಿಲ್ಲ. ಹರೀಶ್ 18 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ.Death - elephant –attack-mysore-zoo-Demands - work - relief

ಆದ್ದರಿಂದ ಹರೀಶ್ ಪತ್ನಿಗೆ ಮೃಗಾಲಯದಲ್ಲಿ ಕೆಲಸ ನೀಡಿ. ಈ ಬಗ್ಗೆ ನಮಗೆ ಲಿಖಿತವಾಗಿ ಬರೆದುಕೊಡಿ. ಅಲ್ಲಿಯವರೆಗೂ ಅಂತ್ಯಕ್ರಿಯೆ ನೆರವೇರಿಸುವುದಿಲ್ಲ ಎಂದು ಮೃಗಾಲಯದ ಕಾರ್ಯನಿರ್ವಹಕ ನಿರ್ದೇಶಕ ಅಜಿತ್ ಕುಲಕರ್ಣಿಗೆ ಕುಟುಂಬಸ್ಥರು ಮನವಿ ಮಾಡಿದರು.  ಮೃತ ಹರೀಶ್ ಪತ್ನಿ ಹಾಗೂ ತಾಯಿ ಅಜಿತ್ ಕುಲಕರ್ಣಿ ಕಾಲಿಗೆ ಬಿದ್ದು ಮನವಿ ಮಾಡಿದರು. ಮೃಗಾಲಯದ ಹೊರಗಡೆ ಹರೀಶ್ ಶವ ಇಟ್ಟು ಸೂಕ್ತ ಪರಿಹಾರಕ್ಕೆ ಆಗ್ರಹಿಸಿದರು.

Key words: Death – elephant –attack-mysore-zoo-Demands – work – relief