Tuesday, August 25, 2026

BDA Apartments

Home Front Page ನಮ್ಮ ಪಕ್ಷದಲ್ಲಿ  ಮೂಲ, ವಲಸಿಗ ಎಂಬ ಪ್ರಶ್ನೆಯೇ ಇಲ್ಲ- ಸಚಿವ ಸುನೀಲ್ ಕುಮಾರ್.

ನಮ್ಮ ಪಕ್ಷದಲ್ಲಿ  ಮೂಲ, ವಲಸಿಗ ಎಂಬ ಪ್ರಶ್ನೆಯೇ ಇಲ್ಲ- ಸಚಿವ ಸುನೀಲ್ ಕುಮಾರ್.

ರಾಮನಗರ,ಫೆಬ್ರವರಿ,2,2022(www.justkannada.in): ನಮ್ಮ ಪಕ್ಷದಲ್ಲಿ  ಮೂಲ, ವಲಸಿಗ ಎಂಬ ಪ್ರಶ್ನೆಯೇ ಇಲ್ಲ. ಒಮ್ಮೆ ನಮ್ಮ ಪಕ್ಷ ಸೇರಿದ ಮೇಲೆ ಅವರು ಬಿಜೆಪಿಯವರೇ ಆಗುತ್ತಾರೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದರು.

ರಾಮನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುನೀಲ್ ಕುಮಾರ್, ನಾವೆಲ್ಲ ಒಂದಾಗಿ ಚುನಾವಣೆ ನಡೆಸುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸುತ್ತೇವೆ. ಯಾರಿಗೆ ಅಭದ್ರತೆ ಕಾಡುತ್ತೋ, ಅವರಿಗೆ ಹೊರಗಡೆ ಬರಬೇಕು ಅನಿಸುತ್ತದೆ. ಕಾಂಗ್ರೆಸ್ ​ಗೆ ಅಭದ್ರತೆ ಕಾಡುತ್ತೆ. ನಮಗೆ ಆ ರೀತಿಯ ಸಮಸ್ಯೆಯಿಲ್ಲ. ನಮ್ಮ ಕಾರ್ಯಕರ್ತರ ವಿಸ್ತರಣೆಯಿಂದ ರಾಜ್ಯದಲ್ಲಿ ಮತ್ತೊಮ್ಮೆ ಗೆದ್ದು ಬರುತ್ತೇವೆ ಎಂದು ನುಡಿದರು.

ಡಿ.ಕೆ ಶಿವಕುಮಾರ್ –ಸಚಿವ ಆನಂದ್ ಸಿಂಗ್ ಭೇಟಿ ಕುರಿತು ಪ್ರತಿಕ್ರಿಯಿಸಿದ ಸುನೀಲ್ ಕುಮಾರ್, ಡಿಕೆಶಿಯನ್ನ ಆನಂದ್ ಸಿಂಗ್ ಭೇಟಿಯಾದ ತಕ್ಷಣ ರಾಜಕೀಯ ಬಣ್ಣ ಕಟ್ಟುವ ಅವಶ್ಯಕತೆ ಇಲ್ಲ. ಬೊಮ್ಮಾಯಿ ಅವರ ಆರು ತಿಂಗಳ ಆಡಳಿತ ನೋಡಿ ಕಾಂಗ್ರೆಸ್ ​ಗೆ ಭ್ರಮ ನಿರಸನವಾಗಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್ ​ಗೆ ಅಭದ್ರತೆಗೆ ಕಾಡಿದೆ. ನಮ್ಮ ಪಾರ್ಟಿಯಲ್ಲಿ ಒಂದು ವ್ಯವಸ್ಥೆ ಇದೆ. ಎಲ್ಲವನ್ನ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಒಂದು ಚೌಕಟ್ಟಿನಲ್ಲಿ ಕರೆದು ಮಾತನಾಡುತ್ತಾರೆ ಎಂದು ತಿಳಿಸಿದರು.

Key words:  no question – immigration-  Minister -Sunil Kumar