Tuesday, August 25, 2026

BDA Apartments

Home Front Page JustKannada ವರದಿಗೆ ಪಾಲಿಕೆ ಆಯುಕ್ತೆಯ ತಕ್ಷಣದ ಸ್ಪಂದನೆ: 24 ಗಂಟೆಯೊಳಗೆ ಅಪಾಯಕಾರಿ ಕೊಂಬೆ ತೆರವು

JustKannada ವರದಿಗೆ ಪಾಲಿಕೆ ಆಯುಕ್ತೆಯ ತಕ್ಷಣದ ಸ್ಪಂದನೆ: 24 ಗಂಟೆಯೊಳಗೆ ಅಪಾಯಕಾರಿ ಕೊಂಬೆ ತೆರವು

ಮೈಸೂರು. ಆಗಸ್ಟ್,25,2026 (www.justkannada.in): ನಗರದ ಚಾಮರಾಜಪುರಂ ಬಜ್ಜಣ್ಣ ಲೇನ್‌ ನ ಕೊಪ್ಪಲು ಮಾರಮ್ಮ ದೇವಸ್ಥಾನ ರಸ್ತೆಯಲ್ಲಿ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದ ಅಪಾಯಕಾರಿ ಮರದ ರೆಂಬೆ, ಕೊಂಬೆಗಳನ್ನು ಮೈಸೂರು ಮಹಾನಗರ ಪಾಲಿಕೆ ತೆರವುಗೊಳಿಸಿದೆ.

ವಿದ್ಯುತ್ ತಂತಿಯ ಮೇಲೆ ಮರದ ಕೊಂಬೆ ನೇತಾಡುತ್ತಿರುವುದರಿಂದ ಸಾರ್ವಜನಿಕರಿಗೆ ಅಪಾಯ ಎದುರಾಗಿರುವ ಕುರಿತು JustKannada ವರದಿ ಪ್ರಕಟಿಸಿತ್ತು. ವರದಿ ಗಮನಕ್ಕೆ ಬಂದ ಬೆನ್ನಲ್ಲೇ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಅವರು ತಕ್ಷಣ ಸ್ಪಂದಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ವರದಿ ಪ್ರಕಟವಾದ 24 ಗಂಟೆಯೊಳಗೆ ಅಪಾಯಕಾರಿ ಕೊಂಬೆಗಳನ್ನು ತೆರವುಗೊಳಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ ಎದುರಾಗಿದ್ದ ಅಪಾಯ ಇದೀಗ ತಪ್ಪಿದಂತಾಗಿದೆ.

ಈ ಹಿಂದೆ ಕೊಂಬೆ ಬಿದ್ದಿದ್ದರೂ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಆದರೆ ತೆರವು ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ವಿದ್ಯುತ್ ತಂತಿಯ ಮೇಲೆ ಕೊಂಬೆ ಬಿದ್ದಿದ್ದರಿಂದ ಯಾವುದೇ ಕ್ಷಣದಲ್ಲಿ ವಿದ್ಯುತ್ ಅವಘಡ ಸಂಭವಿಸುವ ಸಾಧ್ಯತೆಯೂ ಇತ್ತು.

JustKannada ವರದಿಗೆ ಸ್ಪಂದಿಸಿ ತ್ವರಿತವಾಗಿ ಕ್ರಮ ಕೈಗೊಂಡ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಹಾಗೂ ಪಾಲಿಕೆ ಸಿಬ್ಬಂದಿಗೆ ಸ್ಥಳೀಯ ನಿವಾಸಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಜನರ ಸಮಸ್ಯೆಗಳಿಗೆ ಸ್ಪಂದಿಸಿ, ವರದಿಯ ಮೂಲಕ ಅಧಿಕಾರಿಗಳ ಗಮನ ಸೆಳೆದು ಪರಿಹಾರ ದೊರಕಿಸುವುದು ಮಾಧ್ಯಮದ ಜವಾಬ್ದಾರಿ ಎಂಬ ಸಂದೇಶವನ್ನು ಈ ಘಟನೆ ಮತ್ತೊಮ್ಮೆ ಸಾರಿದೆ.

ವರದಿ ಮಾಡಿದ್ದೇವೆ… ಸ್ಪಂದನೆ ಸಿಕ್ಕಿದೆ… ಸಮಸ್ಯೆ ಬಗೆಹರಿದಿದೆ — ಇದು JustKannada ಜನಪರ ಪತ್ರಿಕೋದ್ಯಮದ ಬದ್ಧತೆ.

ENGLISH SUMMARY…

JustKannada Report Gets Quick Response: Dangerous Tree Branches Cleared Within 24 Hours

Mysuru: Dangerous tree branches that had fallen onto and were hanging over live electricity wires at Koppalu Maramma Temple Road in Bajjannalane, Chamarajapuram, have been cleared by the Mysuru City Corporation.

JustKannada had reported the safety concern, highlighting the risk faced by residents and commuters using the road beneath the dangling branches.

Responding promptly to the report, MCC Commissioner M.K. Savitha directed the concerned officials to take necessary action. Within 24 hours of the report being published, the dangerous branches were cleared, preventing a potential accident.

Residents had earlier raised concerns after another branch fell and the issue was brought to the notice of the concerned departments. With the branches dangerously close to live electrical wires, there was a serious risk to public safety.

The swift action by the MCC has now brought relief to residents and commuters in the area.

Local residents have thanked MCC Commissioner M.K. Savitha and the civic staff for responding quickly and resolving the issue.

The incident highlights the importance of responsive civic administration — and the role of responsible local journalism in bringing public safety issues to the attention of authorities.

JustKannada reported it. The Commissioner responded. The problem was resolved.

Thank you, Commissioner M.K. Savitha, for the prompt action.

Key words: JustKannada Report, Quick Response,  Dangerous Tree, Branches, Cleared, MCC