Saturday, August 15, 2026

BDA Apartments

Home Front Page ಮಾಜಿ ಸಿಎಂ ಸಿದ್ಧರಾಮಯ್ಯ ಕೊರೋನಾದಿಂದ ಗುಣಮುಖರಾಗುವಂತೆ ವಿಶೇಷ ಪೂಜೆ ಸಲ್ಲಿಕೆ…

ಮಾಜಿ ಸಿಎಂ ಸಿದ್ಧರಾಮಯ್ಯ ಕೊರೋನಾದಿಂದ ಗುಣಮುಖರಾಗುವಂತೆ ವಿಶೇಷ ಪೂಜೆ ಸಲ್ಲಿಕೆ…

ಮೈಸೂರು,ಆ,8,2020(www.justkannada.in):  ಮಹಾಮಾರಿ ಕೊರೋನಾ ಸೋಂಕಿಗೆ ತುತ್ತಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಬೇಗ ಗುಣಮುಖರಾಗಲಿ ಎಂದು ಮೈಸೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.jk-logo-justkannada-logo

ಮಾಜಿ ಸಿಎಂ ಸಿದ್ದರಾಮಯ್ಯ ಕೊರೊನಾ ಸೋಂಕಿನಿಂದ ಗುಣಮುಖರಾಗುವಂತೆ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಗರದ ಯೋಗನರಸಿಂಹ ದೇವಾಲಯದಲ್ಲಿ  ಸಿದ್ಧರಾಮಯ್ಯ ಅವರ ಅಭಿಮಾನಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೂರ್ತಿ ಹಾಗೂ ಡಿಕೆಶಿ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ಅಧ್ಯಕ್ಷ ರವಿ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು. ಅಭಿಮಾನಿಗಳು ಸಿದ್ದರಾಮಯ್ಯ  ಅವರ ಭಾವ ಚಿತ್ರ ಹಿಡಿದು ಪ್ರಾರ್ಥನೆ ಸಲ್ಲಿಸಿ ದೇವರಿಗೆ ವಿಶೇಷ ಅಭಿಷೇಕ ಮಾಡಿಸಿದರು.mysore-Special puja - cure -former CM -Siddaramaiah -Corona

ದೇವರ ಆಶೀರ್ವಾದದಿಂದ ಮಾಜಿ ಮುಖ್ಯಮಂತ್ರಿಗಳು ಕೊರೊನದಿಂದ ಬೇಗಗುಣಮರಾಗ ಬೇಕು. ಈ ನಾಡಿಗೆ ಅವರ ಸೇವೆ ಅಪಾರವಾಗಿದೆ. ಕೊರೊನಾದಿಂದ ಮುಕ್ತರಾಗಿ  ಮತ್ತೆ ರಾಜಕೀಯ ಸೇವೆ ಮುಂದುವರೆಸಲಿ  ಎಂದು ಅಭಿಮಾನಿಗಳು  ದೇವರಲ್ಲಿ ಬೇಡಿಕೊಂಡರು.

Key words: mysore-Special puja – cure -former CM -Siddaramaiah -Corona