ಕೋವಿಡ್ ನಿರ್ಬಂಧ ಹೆಚ್ಚಳ: ಚಿನ್ನದ ದರದಲ್ಲಿ ಭಾರಿ ಇಳಿಮುಖ

ಬೆಂಗಳೂರು, ಏಪ್ರಿಲ್ 26, 2021 (www.justkannada.in): ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಮುಖ ಶುರುವಾಗಿದೆ.

ಕಳೆದ ಎರಡು ವಹಿವಾಟಿನಲ್ಲಿ ಗರಿಷ್ಠ 48,400 ರೂಪಾಯಿಗೆ ತಲುಪಿದ ನಂತರ ಚಿನ್ನ ತೀವ್ರವಾಗಿ ಕುಸಿದಿತ್ತು.

ಭಾರತದಲ್ಲಿ ಕೋವಿಡ್-19 ನಿಬಂಧನೆಗಳು ಹೆಚ್ಚಿರುವ ಕಾರಣ ಭೌತಿಕ ಚಿನ್ನದ ಬೇಡಿಕೆ ತಗ್ಗಬಹುದು ಎಂದು ಅಂದಾಜಿಸಲಾಗಿದೆ.

ಚಿನ್ನದ ಬೆಲೆ 3 ದಿನಗಳಲ್ಲಿ 1,000 ರೂಪಾಯಿ ಕುಸಿತಕಂಡಿದೆ. ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಕೋವಿಡ್ ನಿರ್ಬಂಧ ಹಿನ್ನೆಲೆಯಲ್ಲಿ ಚಿನ್ನಾಭರಣ ಖರೀದಿಸುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಹೀಗಾಗಿ ಚಿನ್ನದ ದರ ಕುಸಿತವಾಗಿದೆ ಎನ್ನಲಾಗಿದೆ.