Wednesday, August 19, 2026

BDA Apartments

Home Front Page ಕೋವಿಡ್ ವಿರುದ್ಧ ಭಾರತದ ಹೋರಾಟಕ್ಕೆ ನೆರವು ನೀಡಿದ ಸುಂದರ್ ಪಿಚ್ಚೈ

ಕೋವಿಡ್ ವಿರುದ್ಧ ಭಾರತದ ಹೋರಾಟಕ್ಕೆ ನೆರವು ನೀಡಿದ ಸುಂದರ್ ಪಿಚ್ಚೈ

ಬೆಂಗಳೂರು, ಏಪ್ರಿಲ್ 26, 2021 (www.justkannada.in): ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ಕೋವಿಡ್ ನಿಂದಾಗಿ ಸಂಕಷ್ಟದಲ್ಲಿರುವ ಭಾರತಕ್ಕೆ ನೆರವು ನೀಡಿದ್ದಾರೆ.

ಭಾರತದ ಗಿವ್‌ಇಂಡಿಯಾಕ್ಕೆ 135 ಕೋಟಿ ಹಣವನ್ನು ನೀಡುವುದಾಗಿ ಟ್ವಿಟ್ಟರ್ ನಲ್ಲಿ  ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟನ್ನು ನೋಡಿ ಬೇಸರ ವ್ಯಕ್ತಪಡಿಸಿರುವ ಪಿಚ್ಚೈ ಇದರ ವಿರುದ್ಧ ಹೋರಾಡಲು ಕೈ ಜೋಡಿಸಿದ್ದಾರೆ.

ಇನ್ನು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ 3,52,991 ಹೊಸ ಕರೋನ ಪ್ರಕರಣಗಳು, ಧೃಡಪಟ್ಟಿದ್ದು, ಇದೇ ವೇಳೆಯಲ್ಲಿ 2,812 ಮಂದಿ ಮೃತಪಟ್ಟಿದ್ದಾರೆ.