ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ: ಗಂಭೀರ ಆರೋಪ ಮಾಡಿದ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ.

ಬೆಂಗಳೂರು,ಆಗಸ್ಟ್,26,2022(www.justkannada.in): ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಇದೆ. ಈ ಸಂಬಂಧ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಲೋಕೇಶ್ ತಾಳಿಕಟ್ಟೆ, ಶಿಕ್ಷಣ ಸಚಿವ  ಬಿಸಿ ನಾಗೇಶ್ ಅವರನ್ನ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ  ಮೂರನೇ ಬಾರಿ ಪ್ರಧಾನಿಗೆ ಪತ್ರ ಬರೆಯುತ್ತಿದ್ದೇವೆ. ವಜಾಗೊಳಿಸದಿದ್ದರೇ ಕಾನೂನಾತ್ಮಕ ಹೋರಾಟ  ಮಾಡುತ್ತೇವೆ.  ಶೋಕಿ ಮಾಡೋರನ್ನ ಶಿಕ್ಷಣ ಸಚಿವರನ್ನಾಗಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಶಿಕ್ಷಣ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿಗೆ  8 ಅಂಶಗಳನ್ನ ಉಲ್ಲೇಖಿಸಿ ಪತ್ರ ಬರೆಯಲಾಗಿದೆ. ಆರ್ ಆರ್ ನೀಡಲು ಲಂಚ ಪಡೆಯಲಾಗುತ್ತಿದೆ. 10 ವರ್ಷಗಳಿಗೊಮ್ಮೆ ಮಾನ್ಯತೆ ನವೀಕರಣ ಹೊಂದಿರಬೇಕೆಂದು ಹೈಕೋರ್ಟ್ ಹೇಳಿದೆ ಆದರೆ 2 ವರ್ಷಕ್ಕೊಮ್ಮೆ ಲಂಚ ಪಡೆಯುತ್ತಿರುವ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿದೆ.

ಲಂಚದ ವ್ಯಾಪ್ತಿ  ಶೇ 40ರಿಂದ 50ಕ್ಕೆ ಹೆಚ್ಚಾಗಿದೆ. ಇಲಾಖೆಯ ಬಹುತೇಕ ಕೆಲಸಗಳಿಗೆ ಆನ್ ಲೈನ್ ವ್ಯವಸ್ಥೆ ಇಲ್ಲ. ಆನ್ ಲೈನ್ ವ್ಯವಸ್ಥೆ ಇಲ್ಲದ್ದಕ್ಕೆ ಲಂಚಬಾಕರಾಗಿದ್ದಾರೆ.  ಡಿಡಿಪಿಐ 25 ಪರ್ಸೆಂಟ್  ಬಿಇಒ 20 ಪರ್ಸೆಂಟ್ ಅಂತಾ ತಗೋತಾರೆ ಎಂದು ಲೋಕೇಶ್ ತಾಳಿಕಟ್ಟೆ ಆರೋಪಿಸಿದರು.

Key words: Corruption – Education –Department- Rupsa-State President-Lokesh Talikatte