ಭೀಕರ ಅಗ್ನಿ ದುರಂತದಲ್ಲಿ 35  ಮಂದಿ ಸಾವು: ಹಲವು ಮಂದಿಗೆ ಗಂಭೀರ ಗಾಯ..

ನವದೆಹಲಿ,ಡಿ,8,2019(www.justkannada.in):  ರಾಜ್ಯ ರಾಜಧಾನಿ ನವದೆಹಲಿಯಲ್ಲಿ ಇಂದು  ಬೆಳ್ಳಂಬೆಳಗ್ಗೆ ಭೀಕರ ಅಗ್ನಿ ದುರಂತ ಸಂಭವಿಸಿ 35 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ನವದೆಹಲಿಯ ಫಿಲ್ಮಿಸ್ತಾನ್ ಬಳಿ ಮೂರು ಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ ಸಂಭವಿಸಿದ್ದು, 35 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದೆ. ಕಟ್ಟಡದೊಳಗೆ ಇನ್ನು ಹಲವು ಮಂದಿ ಸಿಲುಕಿದ್ದು, ಇದುವರೆಗೆ 50ಕ್ಕೂ ಹೆಚ್ಚು ಮಂದಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ಅಗ್ನಿ ದುರಂತದಿಂದ ಬಾರಿ ಹೊಗೆಗೆ ಉಸಿರುಗಟ್ಟಿ 35 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನ ಎಲ್ ಎನ್ ಜೆಪಿ ಮತ್ತು ಆರ್ ಎಂ ಎಲ್ ಆಸ್ಪತ್ರೆ ಸೇರಿ ನಾಲ್ಕು ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು 30 ಅಗ್ನಿ ಶಾಮಕ ದಳದ ವಾಹಮಗಳು ಕಾರ್ಯಾಚರಣೆ ನಡೆಸುತ್ತಿವೆ.

Key words: new dehli-35 people- death- heavy fire