Sunday, August 2, 2026

BDA Apartments

Home Front Page 13 ಕ್ಷೇತ್ರಗಳಲ್ಲಿ ಗೆಲ್ತೇವೆ : ಮುಂದಿನ ಬಾರಿಯೂ ನಮ್ಮದೇ ಸರ್ಕಾರ- ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ…

13 ಕ್ಷೇತ್ರಗಳಲ್ಲಿ ಗೆಲ್ತೇವೆ : ಮುಂದಿನ ಬಾರಿಯೂ ನಮ್ಮದೇ ಸರ್ಕಾರ- ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ…

ಬೆಂಗಳೂರು,ಡಿ,8,2019(www.justkannada.in):  ಉಪಚುನಾವಣೆಯಲ್ಲಿ ನಾವು 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ. ಈ ಮೂಲಕ ಮೂರುವರೆ ವರ್ಷ ಸ್ಥಿರ ಸರ್ಕಾರ ನೀಡುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಮಾತನಾಡಿ ಡಿ.9 ರಂದು ಸಿಹಿಸುದ್ದಿ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಟಾಂಗ್ ಕೊಟ್ಟ ಸಿಎಂ ಬಿಎಸ್ ಯಡಿಯೂರಪ್ಪ, ಫಲಿತಾಂಶ ಬಳಿಕ ಖಂಡಿತ ಬದಲಾವಣೆಯಾಗುತ್ತದೆ. ನಮ್ಮ ಸರ್ಕಾರತ ಮುಂದುವರೆಯಲಿದೆ. ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲೇ ಇರುತ್ತದೆ. ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಬರುತ್ತದೆ. ಇದಕ್ಕೆ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದೇವೆ.  ಎಂದರು.

ಮೂರುವರೆ ವರ್ಷ ಸ್ಥಿರ ಸರ್ಕಾರ ಜನಪರ ಕೆಲಸ ಮಾಡುತ್ತೇವೆ. ಇದಕ್ಕೆ ವಿಪಕ್ಷಗಳು ಸಹಕಾರ ಕೊಡಬೇಕು. ಇನ್ನು ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ಹೋಗುವ ನಿರ್ಧಾರ ಮಾಡಿಲ್ಲ ಎಂದು ಸಿಎಂ ಬಿಎಸ್  ಯಡಿಯೂರಪ್ಪ ತಿಳಿಸಿದರು.

Key words:  by election-13 constituency-win- Next time -our – government – CM BS Yeddyurappa