ಕೊಪ್ಪಳದಲ್ಲಿ ಅಜ್ಜಿಗೆ 1 ಲಕ್ಷ ರೂ. ವಿದ್ಯುತ್ ಬಿಲ್: ಸ್ಪಷ್ಟನೆ ನೀಡಿದ ಇಂಧನ ಸಚಿವ ಕೆ.ಜೆ.ಜಾರ್ಜ್.

ಬೆಂಗಳೂರು,ಜೂನ್,22,2023(www.justkannada.in): ಕೊಪ್ಪಳದ ಭಾಗ್ಯನಗರದಲ್ಲಿ ವಾಸವಾಗಿರುವ ಅಜ್ಜಿಯೊಬ್ಬರಿಗೆ 1 ಲಕ್ಷ ರೂ. ವಿದ್ಯುತ್ ಬಿಲ್ ಬಂದಿದೆ.   ಅವರ ಮನೆಯಲ್ಲಿ ಉರಿಯೋದು ಎರಡು ಬಲ್ಬ್ ಮಾತ್ರ. ಪ್ರತಿ ತಿಂಗಳು ರೂ.70-80 ಬರುತ್ತಿದ್ದ ವಿದ್ಯುತ್ ಬಿಲ್ ಈ ತಿಂಗಳು ರೂ. 1 ಲಕ್ಷ ರೂ ಬಂದಿದ್ದು ಅಜ್ಜಿ ಆತಂಕಕ್ಕೊಳಗಾಗಿದ್ದಾರೆ.

ಆದರೆ ಈ ಕುರಿತು ಮಾತನಾಡಿರುವ ಇಂಧನ ಸಚಿವ ಕೆ.ಜೆ ಜಾರ್ಜ್ , ಕೆಲವೆಡೆ ಮೀಟರ್​ ಸಮಸ್ಯೆಯಿಂದ ವಿದ್ಯುತ್​ ದರ ಹೆಚ್ಚಳ ಆಗಿದೆ. ಕೊಪ್ಪಳದಲ್ಲೂ ಅಜ್ಜಿ ಮನೆಗೆ 1 ಲಕ್ಷ ರೂ. ಕರೆಂಟ್​ ಬಿಲ್​ ಬಂದಿದೆ. ಮೀಟರ್​ ಸಮಸ್ಯೆಯಿಂದ 1 ಲಕ್ಷ ರೂ. ಕರೆಂಟ್​ ಬಿಲ್​ ಬಂದಿದೆ. ಅಜ್ಜಿ‌ ಅಷ್ಟೊಂದು ಕರೆಂಟ್​​ ಬಿಲ್​​ ಕಟ್ಟಬೇಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ ವಿದ್ಯುತ್​ ದರ ಹೆಚ್ಚಳ ಆಗಿದ್ದಕ್ಕೆ ಕಾರಣ ನಾವಲ್ಲ. ಹಿಂದಿನ ಸರ್ಕಾರವಿದ್ದಾಗ KERC ವಿದ್ಯುತ್​ ದರ ಏರಿಕೆ ಮಾಡಿದೆ. ಏಪ್ರಿಲ್, ಮೇ ತಿಂಗಳಿನ ಬಿಲ್​ ಕಲೆಕ್ಟ್​​ ಮಾಡಲು ಹೇಳಿದ್ದಾರೆ. ಒಂದೇ ಬಾರಿ 2 ತಿಂಗಳ ವಿದ್ಯುತ್  ದರ​ ಏರಿಕೆಯ ಬಿಲ್​​ ಬಂದಿದೆ. ನಮ್ಮ ಸಾಫ್ಟ್​​ವೇರ್ ಹಳೆಯದು, ಹೊಸ ಸಾಫ್ಟ್​​ವೇರ್​​​ ಹಾಕಬೇಕು ಎಂದಿದ್ದಾರೆ.

Key words: 1 lakh – Power Bill-koppal- Clarified – Energy Minister -KJ George