ಕೊಡಗು ಜಿಲ್ಲೆಯಲ್ಲಿ ಮತ್ತೆ ಕೊರೋನಾ ಸ್ಫೋಟ….

ಕೊಡಗು,ಜು,1,2020(www.justkannada.in):  ಕೊಡಗು ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾ ಸ್ಪೋಟಗೊಂಡಿದೆ. ಇಂದು ಜಿಲ್ಲೆಯಲ್ಲಿ ನಾಲ್ವರಿಗೆ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಬೆಂಗಳೂರಿನಿಂದ ಬಂದಿದ್ದ ಸೋಂಕಿತ ವ್ಯಕ್ತಿ ಸಂಪರ್ಕದಲ್ಲಿದ್ದ ನಾಲ್ಕು ಮಂದಿಗೆ ಕೊರೋನಾ ಸೋಂಕು ಇರುವುದು  ದೃಢವಾಗಿದೆ. 3 ತಿಂಗಳ ಮಗುವಿಗೂ ಮಹಾಮಾರಿ ಕೊರೋನಾ ತಗುಲಿದ್ದು, 6 ವರ್ಷದ ಮಗುವಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. corona-virus-kodagu-disitrict

ಇನ್ನು 56 ವರ್ಷದ ವ್ಯಕ್ತಿ ಹಾಗೂ 87 ವರ್ಷದ ವ್ಯಕ್ತಿಗೆ  ಪಾಸಿಟಿವ್ ಇರುವುದು ಪತ್ತೆಯಾಗಿದೆ. ನಾಲ್ವರು ಸೋಂಕಿತರು ವಿರಾಜಪೇಟೆ ತಾಲ್ಲೂಕಿನ ಹುಂಡಿ ಗ್ರಾಮದ ನಿವಾಸಿಗಳಾಗಿದ್ದಾರೆ. ಈ ಮೂಲಕ ಕೊಡಗಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಟ್ಟು 58ಕ್ಕೆ ಏರಿಕೆಯಾಗಿದೆ.

Key words: corona virus- kodagu -disitrict