‘ಜೀವ ಇದ್ದರೆ ಜೀವನ’: ಕೊರೋನಾ ವೈರಸ್ ಜಾಗೃತಿಗೆ ಕೈ ಜೋಡಿಸಿದ ಕುಂಚ ಕಲಾವಿದರು….

ಮೈಸೂರು,ಜು,1,2020(www.justkannada.in):  ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಸೋಂಕು ಹರಡದಂತೆ ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯವಿದೆ. ಹೀಗಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕುಂಚ ಕಲಾವಿದರು ಕೊರೋನಾ ಸೋಂಕಿನ ಜಾಗೃತಿಗೆ ಕೈ ಜೋಡಿಸಿದ್ದಾರೆ.

ಗೋಡೆ ಬರಹದ ಮೂಲಕ ಜನರಲ್ಲಿ ಕೊರೋನಾ ಬಗ್ಗೆ ಜಾಗೃತಿಮೂಡಿಸಲು ಮೈಸೂರು ಜಿಲ್ಲಾ ಕುಂಚ ಕಲಾವಿದರ ಸಂಘ ಮುಂದಾಗಿದೆ. ಕುಂಚ ಕಲಾವಿದರು  ಗೋಡೆ ಬರಹದ ಮೂಲಕ ‘ಜೀವ ಇದ್ದರೆ ಜೀವನ’ ಕೊರೊನಾ ಇದೇ ಎಚ್ಚರಿಕೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ಭಯ ಬೇಡ ಎಚ್ಚರದಿಂದಿರಿ ಎಂಬ ಸಂದೇಶವನ್ನ ಸಾರುತ್ತಿದ್ದಾರೆ. ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಪಾಲಿಸುವಂತೆ ಕುಂಚ ಕಲಾವಿದರು ಮತ್ತಷ್ಟು ಜಾಗೃತಿಗೆ ಮುಂದಾಗಿದ್ದಾರೆ.mysore -Artists - Awareness -Corona Virus….

ಅದರಲ್ಲೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು, ನಾಗರೀಕರಿಗೆ ಕೊರೊನಾ ಎದುರಿಸುವ ವಿಧಾನಗಳ ಬಗ್ಗೆ ಗೋಡೆಗಳಲ್ಲಿ  ಬರಹದ ಮೂಲಕ ಕುಂಚ ಕಲಾವಿದರು ತಿಳಿಸುತ್ತಿದ್ದು, ಹೀಗಾಗಿ ನಗರದ ಗೋಡೆ ಗೋಡೆಯಲ್ಲೂ ಕೊರೊನಾ ಎಚ್ಚರಿಕೆ ಸಂದೇಶ ಕಂಡು ಬರುತ್ತಿದೆ.

Key words: mysore -Artists – Awareness -Corona Virus….