Thursday, August 6, 2026

BDA Apartments

Home Front Page ಸಿದ್ಧರಾಮಯ್ಯ ಸ್ವಯಂ ಘೋಷಿತ ಹಿಂದುಳಿದ ವರ್ಗಗಳ ನಾಯಕ- ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ವಾಗ್ದಾಳಿ.

ಸಿದ್ಧರಾಮಯ್ಯ ಸ್ವಯಂ ಘೋಷಿತ ಹಿಂದುಳಿದ ವರ್ಗಗಳ ನಾಯಕ- ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ವಾಗ್ದಾಳಿ.

ಬೆಂಗಳೂರು,ಜುಲೈ,29,2023(www.justkannada.in):  ಸಿಎಂ ಸಿದ್ದರಾಮಯ್ಯ ಸ್ವಯಂ ಘೋಷಿತ ಹಿಂದುಳಿದ ವರ್ಗಗಳ ನಾಯಕ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಚುನಾವಣೆ ಮೊದಲು ಒಳ ಮೀಸಲಾತಿ ಜಾರಿ ಮಾಡ್ತೇವೆ ಎಂದು ಸಿದ್ಧರಾಮಯ್ಯ ಹೇಳಿದ್ದರು. ಆದರೆ ಒಳ ಮೀಸಲಾತಿ ಜಾರಿಗೊಳಿಸಲು ಸಿದ್ದರಾಮಯ್ಯ ಮುಂದಾಗುತ್ತಿಲ್ಲ. ಈಗ ಒಳ ಮೀಸಲಾತಿ ಮಾಡಲ್ಲ, ಹಿಂದೆಯೂ ಮಾಡಿಲ್ಲ ಎನ್ನುತ್ತಿದ್ದಾರೆ. ಸಂಸತ್ ​ನಲ್ಲಿ ಚರ್ಚೆ ವೇಳೆ ಒಬ್ಬ ಸಚಿವನಾಗಿ ನಾನು ಉತ್ತರ ಕೊಟ್ಟಿದ್ದೇನೆ. ಆರ್ಟಿಕಲ್ 341 ಏನು ಹೇಳುತ್ತೆ ಅದನ್ನು ಸದನದಲ್ಲಿ ಹೇಳಿದ್ದೇನೆ. ನಿಮಗೆ ನಿಜವಾಗಿ ಬದ್ಧತೆ, ಎದೆಗಾರಿಕೆ ಇದ್ದರೆ ವಿಶೇಷ ಅಧಿವೇಶನ ಕರೆಯಿರಿ. ವಿಶೇಷ ಅಧಿವೇಶನ ಕರೆದು ಒಳ ಮೀಸಲಾತಿ ಬಗ್ಗೆ ನಿರ್ಣಯ ಮಾಡಿ ಎಂದು ಕಿಡಿಕಾರಿದರು.

I.N.D.I.A ಸದಸ್ಯರು ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ವರ್ಗದ ನಾಯಕರಾಗಿ ಅವರ ಜೊತೆ ನೀವು ಚರ್ಚೆ ಮಾಡಿ ಎಂದು ಸಿಎಂ ಸಿದ್ಧರಾಮಯ್ಯಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಒತ್ತಾಯಿಸಿದರು.

Key words: Siddaramaiah -self-proclaimed -leader – backward -classes- Union Minister -A. Narayanaswamy