ದೇಶದಲ್ಲಿ ಇಳಿಕೆಯಾಗುತ್ತಿರುವ ಕೊರೋನಾ ಸೋಂಕಿನ ಪ್ರಕರಣ.

ನವದೆಹಲಿ,ಜೂನ್,7,2021(www.justkannada.in): ದೇಶದಲ್ಲಿ ಇತ್ತೀಚೆಗೆ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದು,  ಕಳೆದ 24ಗಂಟೆಗಳಲ್ಲಿ ದೇಶದಲ್ಲಿ  1 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿದೆ.jk

ಇದು ಕೋವಿಡ್-19 ಪ್ರಕರಣಗಳಲ್ಲಿ ಎರಡು ತಿಂಗಳಲ್ಲೇ ಅತ್ಯಂತ ಕಡಿಮೆ ಏಕ ದಿನದ ಏರಿಕೆಯಾಗಿದೆ. ಕೇಂಧ್ರ ಆರೋಗ್ಯ ಸಚಿವಾಲಯದ  ನೀಡಿರುವ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,00,636 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ.  ಕಳೆದ 24 ಗಂಟೆಗಲ್ಲಿ ಕೊರೋನಾ ಸೋಂಕಿಗೆ 2427 ಮಂದಿ ಸಾವನ್ನಪ್ಪಿದ್ದಾರೆ. ಭಾರತದ ಒಟ್ಟು ಪ್ರಕರಣಗಳ ಸಂಖ್ಯೆ 2,89,09,975 ಆಗಿದೆ. ಒಟ್ಟು ಕೋವಿಡ್ ಸಾವಿನ ಸಂಖ್ಯೆ ಈಗ 3.50 ಲಕ್ಷಕ್ಕೆ ತಲುಪಿದೆ.

ಇದರೊಂದಿಗೆ ಭಾರತದ ಸಕ್ರಿಯ ಕೇಸ್ ಲೋಡ್ 14,01,609 ಕ್ಕೆ ಇಳಿಕೆಕಂಡರೆ, ಸಕ್ರಿಯ ಪ್ರಕರಣಗಳು 24 ಗಂಟೆಗಳಲ್ಲಿ 76,190 ರಷ್ಟು ಕಡಿಮೆಯಾಗಿವೆ. ಕಳೆದ 24 ಗಂಟೆಗಳಲ್ಲಿ 1,74,399 ಡಿಸ್ಚಾರ್ಜ್ ಗಳು ದಾಖಲಾಗಿವೆ.

Key words: corona case- Decrease- country.