ಸೋತವರು ಗೆದ್ದವರು ಎಂಬ ಪ್ರಶ್ನೆ ಇಲ್ಲ: ಮೊದಲು ಕೊಟ್ಟ ಭರವಸೆ ಈಡೇರಿಸಲಿ-ಮಾಜಿ ಸಚಿವ ಎಂಟಿಬಿ ನಾಗರಾಜ್…

ಬೆಂಗಳೂರು,ಜ,29,2020(www.justkannada.in):  ನಾವು 17 ಜನರು ಶಾಸಕ ಸ್ಥಾನ ತ್ಯಾಗ ಮಾಡಿ ಬಿಜೆಪಿಗೆ ಬಂದಿದ್ದೇವೆ. ಹೀಗಾಗಿ ಮೊದಲು ಅವರು ಕೊಟ್ಟಿರುವ ಭರವಸೆಯನ್ನ ಈಡೇರಿಸಲಿ ಎಂದು ಮಾಜಿ ಸಚಿವ ಎಂ.ಟಿ.ಬಿ ನಾಗರಾಜ್ ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಎಂ.ಟಿ.ಬಿ ನಾಗರಾಜ್,  ನಾವು ರಾಜೀನಾಮೆ ನೀಡಿದ್ದರಿಂದ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಬಿಎಸ್ ವೈ ಅವರ ಶಾಸಕರುಗಳು ಮಂತ್ರಿಗಳಾಗಿದ್ದಾರೆ.  ಹೀಗಾಗಿ ನಮ್ಮನ್ನ ಬಿಜೆಪಿಯಲ್ಲಿ ಗೌರವದಿಂದ ಕಾಣಬೇಕು.  ಸೋತವರು ಗೆದ್ದವರು ಎಂಬ ಪ್ರಶ್ನೆಯಲ್ಲ  ನಾವು 17 ಜನರು ತ್ಯಾಗ ಮಾಡಿ ಬಂದಿದ್ದೇವೆ.  ಮಂತ್ರಿ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದೇವೆ.  ಶಾಸಕ ಸ್ಥಾನ ಮತ್ತು ಮಂತ್ರಿ ಸ್ಥಾನ ಎರಡಕ್ಕೂ ರಾಜೀನಾಮೆ ಕೊಟ್ಟು ಬಂದವನು ನಾನೊಬ್ಬನೇ. ಹೀಗಾಗಿ ಕೊಟ್ಟಿರುವ ಭರವಸೆ ಈಡೇರಿಸಲಿ ಎಂದರು.

ಬಚ್ಚೇಗೌಡ ಮತ್ತು ಶರತ್ ಬಚ್ಚೇಗೌಡ ಬೆಂಬಲಿಸುತ್ತಾರೆಂದು ಬಿಜೆಪಿಗೆ ಬಂದೆ. ಸಿಎಂ ಬಿಎಸ್ ಯಡಿಯೂರಪ್ಪ  ಹೇಳಿದ್ದ ಕಾರಣಕ್ಕೆ ಬಿಜೆಪಿಗೆ ಬಂದಿದ್ದೇನೆ. ಸಿಎಂ ಬಿಎಸ್ ವೈ  ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಾಯಕ.  ಬಿಎಸ್ ವೈ ಮೇಲೆ ಭರವಸೆ ಇದೆ ಎಂದು ಎಂಟಿಬಿ ನಾಗರಾಜ್ ತಿಳಿಸಿದರು.

Key words: no question – lose –win-cm bs yeddyurappa- bjp-Former minister -MTB Nagaraj …