Sunday, August 2, 2026

BDA Apartments

Home Front Page ನಮ್ಮವರಿಂದಲೇ ಗೊಂದಲ ಸೃಷ್ಠಿ: ನಾಯಕತ್ವ ಬದಲಾವಣೆ ಮಾತೇ ಇಲ್ಲ-ಶಾಸಕ ಎಂ.ಪಿ ರೇಣುಕಾಚಾರ್ಯ.

ನಮ್ಮವರಿಂದಲೇ ಗೊಂದಲ ಸೃಷ್ಠಿ: ನಾಯಕತ್ವ ಬದಲಾವಣೆ ಮಾತೇ ಇಲ್ಲ-ಶಾಸಕ ಎಂ.ಪಿ ರೇಣುಕಾಚಾರ್ಯ.

ದಾವಣಗೆರೆ,ಜೂನ್,7,2021(www.justkannada.in): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾತೇ ಇಲ್ಲ ಎಂದು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ತಿಳಿಸಿದ್ದಾರೆ.jk

ಈ ಕುರಿತು ಇಂದು ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ನಮ್ಮವರೇ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರಿಂದ ಪಕ್ಷದ ಇಮೇಜ್ ಗೆ ಧಕ್ಕೆಯಾಗುತ್ತದೆ. ಶಾಸಕರನ್ನ ಗೆಲ್ಲಿಸಲು ಆಗದೇ ಇರುವವರು ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಬಿಎಸ್ ವೈ ಮನಸ್ಸಿಗೆ ನೋವಾಗಿದೆ ಎಂದು  ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.

ಸಿಎಂ ಬಿಎಸ್ ವೈ ಪರ 65 ಶಾಸಕರು ಸಹಿ ಹಾಕಿದ್ದೇವೆ. ಇದನ್ನ ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ನಳೀನ್ ಕುಮಾರ್ ಕಟೀಲ್ ಗೆ ತಲುಪಿಸುತ್ತೇವೆ ಯಾವಾಗ ಪತ್ರ ನೀಡಬೇಕು ಎಂಬುದನ್ನ ಶೀಘ್ರದಲ್ಲೇ ತಿಳಿಸುತ್ತೇವೆ. ಕಳೆದ ವಾರ ಸಿಎಂ ಬಿಎಸ್ ಯಡಿಯೂರಪ್ಪರನ್ನ ಭೇಟಿಯಾಗಿದ್ದವು. ಹೈಕಮಾಂಡ್ ಭೇಟಿ ಮಾಡುವುದಾಗಿ ಹೇಳಿದ್ದವು. ಆದರೆ ಸಿಎಂ ಬಿಎಸ್ ವೈ ಕ್ಷೇತ್ರದ ಕೆಲಸ ಮಾಡುವಂತೆ ಸೂಚಿಸಿದ್ದರು ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ತಿಳಿಸಿದರು.

key words: Confusion- created – ourselves-no leadership –change-MLA- MP Renukacharya.