ನಾಳೆ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ: ಹೆಚ್ಚಿನ ಪೊಲೀಸ್ ಭದ್ರತೆ…

ಮೈಸೂರು,ಅ,7,2019(www.justkannada.in) ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆ ನಾಳೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಹಿನ್ನೆಲೆ ಪೊಲೀಸ್ ಭದ್ರತೆ ಮಾಡಲಾಗಿದೆ.

ನಗರದ ಹೆಚ್ಚು ಜನ ಸಂದಣಿ ಇರುವ ಜಾಗಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸರನ್ನ ನಿಯೋಜನೆ ಮಾಡಲಾಗಿದ್ದು , ಈ ನಡುವೆ ತಮ್ಮ  ತಮ್ಮ ಕರ್ತವ್ಯ ಸ್ಥಳಗಳತ್ತ ಪೋಲೀಸರು ತೆರಳುತ್ತಿದ್ದಾರೆ. ಜಂಬೂ ಸವಾರಿ ಮೆರವಣಿಗೆ ಅರಮನೆಯಿಂದ ಕೆ.ಆರ್ ಸರ್ಕಲ್ , ಅಯುರ್ವೇದ ಆಸ್ಪತ್ರೆ ವೃತ್ತದ ಮಾರ್ಗವಾಗಿ ಬನ್ನಮಂಟಪದ ಪಂಜಿನ ಕವಾಯತು ಮೈದಾನಕ್ಕೆ ಸಾಗಲಿದೆ. ಈ ಸ್ಥಳದಲ್ಲಿ ಹೆಚ್ಚಿನ ಜನ ಸಂದಣಿ ಸೇರಲಿದ್ದು ಹೀಗಾಗಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸರನ್ನು ನಿಯೋಜನೆ ಮಾಡಲಾಗಿದೆ.

ಇನ್ನು  ಜಂಬೂ ಸವಾರಿ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲೀಸರು ಎಚ್ಚರಿಕೆ ವಹಿಸಲಿದ್ದಾರೆ. ಹಾಗೆಯೇ  ಜನರೊಂದಿಗೆ ಸಂಯಮದಿಂದ ವರ್ತಿಸುವಂತೆ ಮೇಲಾಧಿಕಾರಿಗಳು ಪೊಲೀಸ್ ಸಿಬ್ಬಂದಿಗಳಿಗೆ ಕರೆ ನೀಡಿದ್ದಾರೆ.

Key words: Tomorrow –mysore dasara Jumbo ride- police security.