ಆಯುಧ ಪೂಜೆ ಸಂಭ್ರಮ: ಮೈಸೂರು ದಸರಾ ಗಜಪಡೆಗೆ ಪೂಜೆ ನೆರವೇರಿಸಿದ ಸಂಸದೆ ಶೋಭಾ ಕರಂದ್ಲಾಜೆ…..

ಮೈಸೂರು,ಅ,7,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಗೆ ಒಂದು ದಿನ ಬಾಕಿ ಇದ್ದು ಇಂದು ಆಯುಧಾ ಪೂಜೆ ಹಿನ್ನೆಲೆ ಗಜಪಡೆಯ ಆನೆಗಳಿಗೆ  ಸಂಸದೆ ಶೋಭಾ ಕರಂದ್ಲಾಜೆ ಪೂಜೆ ಸಲ್ಲಿಸಿದರು.

ಮೈಸೂರಿನ ಅರಮನೆ ಅಂಗಳದಲ್ಲಿ ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಸೂಚನೆ ಮೇರೆಗೆ  ಸಂಸದೆ ಶೋಭ ಕರಂದ್ಲಾಜೆ ದಸರಾ ಗಜಪಡೆಗಳಿಗೆ ಪೂಜೆ ಸಲ್ಲಿಸಿದರು.

ಸಂಪ್ರದಾಯದಂತೆ ಫಲತಾಂಬೂಲ ನೀಡಿ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಡೆಗೆ ಪೂಜೆ ಸಲ್ಲಿಸಲಾಯಿತು. ಅರಣ್ಯ ಇಲಾಖೆ ನೇತೃತ್ವದಲ್ಲಿ ಗಣ್ಯರು ಮತ್ತು ಅಧಿಕಾರಿಗಳು ಪೂಜೆಯಲ್ಲಿ ಭಾಗಿಯಾದರು.

Key words: ayudha pooja- MP -Shobha Karandlaje-spacial worship-mysore-dasara-gajapade