ರಾಮಮಂದಿರ ನಿರ್ಮಾಣ ಭೂಮಿಪೂಜೆ: ಶ್ರೀರಾಮನ ಹೊಸ ಶಕೆ ಪ್ರಾರಂಭವಾಗಿಲಿ –ಸಚಿವ ಎಸ್.ಟಿ ಸೋಮಶೇಖರ್ ನುಡಿ…

ಬೆಂಗಳೂರು,ಆ,4,2020(www.justkannada.in):    ಶ್ರೀರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಇದೇ ಆ. 5ರಂದು (ಬುಧವಾರ) ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಯಲಿರುವುದು ಅತ್ಯಂತ ಸಂತಸದ ವಿಷಯ. ಕೋಟ್ಯಂತರ ಮಂದಿಯ ಭಾವನಾತ್ಮಕ ಕ್ಷೇತ್ರವಾಗಿರುವ ಈ ಪುಣ್ಯಸ್ಥಳದಲ್ಲಿ ಗತವೈಭವ ಮರುಕಳಿಸಲಿ ಎಂಬುದು ನನ್ನ ಆಶಯ. ಭಾರತೀಯ ಭೂಪಟದಲ್ಲಿ ಅಯೋಧ್ಯೆ ಮತ್ತೆ ವಿಜೃಂಭಿಸಲಿ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ನುಡಿದಿದ್ದಾರೆ.jk-logo-justkannada-logo

ನಾಳೆ ರಾಮಮಂದಿರ ಭೂಮಿಪೂಜೆ ಕುರಿತು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಈ ಹಿಂದೆ ಶ್ರೀರಾಮನ ಜನ್ಮಭೂಮಿ ವಿಷಯವಾಗಿ ಏನೇ ವಿವಾದ ಇದ್ದಿರಬಹುದು. ಅದೀಗ ಘನ ಸರ್ವೋಚ್ಚ ನ್ಯಾಯಾಲಯದಲ್ಲಿಯೇ ಬಗೆಹರಿದಿದೆ. ಹೀಗಾಗಿ ಇಂದು ನಾವು-ನೀವೆಲ್ಲರೂ  ಅದಕ್ಕೆ ಬದ್ಧರಾಗಿ ನಡೆಯಬೇಕಾಗಿರುವುದು ಕರ್ತವ್ಯ ಕೂಡಾ ಹೌದು. ವಿವಾದಿತ ಭೂಮಿ ಸಂಬಂಧ ಈ ನೆಲದಲ್ಲಿ ಅನೇಕ ಹೋರಾಟಗಳು ನಡೆದಿವೆ.  ಸಂಘಪರಿವಾರದವರು ಸೇರಿದಂತೆ ಬಿಜೆಪಿ ಪ್ರಮುಖ ನಾಯಕರು, ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಹೋರಾಟದ ಕೊಡುಗೆಯೂ ಇದರ ಹಿಂದಿದೆ. ಆದರೆ, ಈಗೆಲ್ಲ ಸಮಸ್ಯೆಗಳೂ ನಿವಾರಣೆಯಾಗಿದ್ದು, ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಚಾಲನೆ ದೊರೆಯುವ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದೇವೆ ಎಂದರು. construction-ram-mandir-new-era-sri-rama-begins-minister-st-somashekhar

ಹೀಗಾಗಿ ಇಲ್ಲಿಂದ ಅಯೋಧ್ಯೆಯಲ್ಲಿ ಶ್ರೀರಾಮನ ಹೊಸ ಶೆಕೆ ಪ್ರಾರಂಭವಾಗಲಿ . ಭಗವಾನ್ ಶ್ರೀರಾಮನು ಆದಷ್ಟು ಬೇಗ ದೇಶವನ್ನು ಕೊರೋನಾ ಮುಕ್ತ ಮಾಡಲಿ ಎಂದೂ ಈ ಸಂದರ್ಭದಲ್ಲಿ ಕೋರಿಕೊಳ್ಳುತ್ತೇನೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

Key words: Construction – Ram Mandir- New era -Sri Rama –begins-Minister- ST Somashekhar …